ವಾಟ್ಸ್​ಅಪ್​ಗೆ ಲಿಂಕ್​ ಕಳುಹಿಸಿ 1.29 ಲಕ್ಷ ರೂ. ವಂಚನೆ

Cibra
Published on

ಹಾವೇರಿ: ಪಿಎಂ ಮೋದಿ ಕಿಸಾನ್​ ಎಂಬ ಲಿಂಕ್​ ಕಳುಹಿಸಿದ ಅದರ ಮೂಲಕ 1.29 ಲಕ್ಷ ರೂ. ವಂಚಿಸಿದ ಕುರಿತು ಇಲ್ಲಿಯ ಸೈಬರ್​ ಕೆಂ ಪೊಲೀಸ್​ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.

ತಾಲೂಕಿನ ಕಿತ್ತೂರ ಗ್ರಾಮದ ಬಸಯ್ಯ ಶಿವಯ್ಯ ಬೆಳ್ಳಟ್ಟಿಮಠ (33) ಎಂಬುವರಿಗೆ ಮೋಸ ಮಾಡಿರುವುದು.

ಇವರ ವಾಟ್ಸ್​ಅಪ್​ ನಂಬರ್​ಗೆ ಪಿಎಂ ಮೋದಿ ಕಿಸಾನ್​ ಎಂದು ಲಿಂಕ್​ ಕಳುಹಿಸಿದ್ದಾನೆ. ಬಸಯ್ಯ ಲಿಂಕ್​ ಮೇಲೆ ಕ್ಲಿಕ್​ ಮಾಡುತ್ತಿದ್ದಂತೆ ಅವರ ಖಾತೆಯಿಂದ 1.29 ಲಕ್ಷ ರೂ. ಯಾವುದೋ ಖಾತೆಗೆ ವರ್ಗಾವಣೆಯಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net