ಏನೇ ಬಂದರೂ ಶಾಂತವಾಗಿರಲಿ ಮನಸು

ylp veda
Published on

ಯಲ್ಲಾಪುರ: ಕಷ್ಟ-ಸುಖಗಳೆರಡನ್ನೂ ಸಮಾನವಾಗಿ ಸ್ವೀಕರಿಸುವವರು, ಸದಾ ಶಾಂತ ಮನಸು ಹೊಂದಿದವರು ಮಾತ್ರ ಯೋಗಿಗಳೆನಿಸಲು ಸಾಧ್ಯ ಎಂದು ಶಿರಳಗಿಯ ಚೈತನ್ಯ ರಾಜಾರಾಮಾಶ್ರಮದ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ ನುಡಿದರು.

ತಾಲೂಕಿನ ಹುಲೇಕೋಣೆಯ ‘ಶಿವಗಂಗಾ’ ಆವಾರದಲ್ಲಿ 8ನೇ ವರ್ಷದ ವೇದ ಪಾರಾಯಣ ಕಾರ್ಯಕ್ರಮದ ಸಮಾರೋಪದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಆಶ್ರಮವಾಸಿಗಳಾಗಿ, ಕಾವಿ ಧರಿಸಿ, ನಿತ್ಯವೂ ಜಪ-ತಪಗಳಲ್ಲಿ ತೊಡಗಿದವರೇ ಯೋಗಿಗಳೆಂಬ ಭಾವನೆಯಿದೆ. ಆದರೆ, ಸಂಸಾರದಲ್ಲಿದ್ದುಕೊಂಡೇ ಸಮಚಿತ್ತರಾಗಿ ಸಾಗುವವರೇ ನಿಜವಾದ ಯೋಗಿಗಳಾಗುತ್ತಾರೆ. ಏನೇ ಬರಲಿ, ಮನಸು ಶಾಂತವಾಗಿರಲಿ ಎಂಬುದು ನಮ್ಮ ಜೀವನದ ಧ್ಯೇಯವಾಗಿರಬೇಕು. ಹಾಗಾಗಲು ಬದುಕಿನ ಪರಿಸ್ಥಿತಿಯನ್ನು ಬದಲಿಸಬೇಕಾಗಿಲ್ಲ, ನಮ್ಮ ಮನಸ್ಥಿತಿಯನ್ನು ಬದಲಿಸಿಕೊಂಡರೆ ಸಾಕು ಎಂದು ಭಗವದ್ಗೀತೆಯ ಶ್ಲೋಕಗಳು ಹಾಗೂ ಮಂಕುತಿಮ್ಮನ ಕಗ್ಗಗಳನ್ನು ಉದಾಹರಿಸಿ ವಿವರಿಸಿದರು.

ವೇದ ಪಾರಾಯಣ ನಡೆಸಿದ ಗಣೇಶ ಭಟ್ಟ ಹಾಗೂ ಶ್ರೀರಾಮ ಭಟ್ಟ ಅವರನ್ನು ಶ್ರೀಗಳು ಆಶೀರ್ವದಿಸಿದರು. ವೇ.ಮಂಜುನಾಥ ಭಟ್ಟ ಮೊಟ್ಟೆಗದ್ದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವರಾಮ ಭಟ್ಟ, ಗಂಗಾ ಭಟ್ಟ, ಮಂಜುನಾಥ ಭಟ್ಟ, ಸುಮಂಗಲಾ ಭಟ್ಟ ಶ್ರೀಗಳಿಗೆ ಫಲ ಸಮರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net