ಯತ್ನಾಳ ಹೇಳಿದ್ದು ಶುದ್ಧ ಸುಳ್ಳು

What Yathna said was a complete lie.
ಮಾತೆ ಗಂಗಾದೇವಿ
Published on

ಕೂಡಲಸಂಗಮ : ಇಂದು ಬಸನಗೌಡ ಪಾಟೀಲ ಯತ್ನಾಳ ವೈಭವೀಕರಿಸುತ್ತಿರುವ ಸನಾತನ ಧರ್ಮ ಹಿಂದೆ ಬಸವಣ್ಣ ಸಾಮಾಜಿಕ ಕ್ರಾಂತಿಗೆ ಅಡ್ಡಿಯನ್ನು ಮಾಡಿತ್ತು, ಕಿರುಕುಳ ಕೊಟ್ಟಿತ್ತು ಎಂಬುದನ್ನು ಅರಿಯುವ ಕಾರ್ಯ ಮಾಡಬೇಕು ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಪ್ರಕಟಣೆಯಲ್ಲಿ ತಿಳಸಿದ್ದಾರೆ

ಸಾಮಾಜಿಕ ಕ್ರಾಂತಿಯ ಮೂಲಕ ಬದಲಾವಣೆ ತಂದ ಬಸವಣ್ಣನವರು ಕ್ರಾಂತಿಕಾರಿಯಾಗಿದ್ದರು. ಬಸವಣ್ಣನವರು ಹೊಳೆಗೆ ಹಾರಿಕೊಂಡು ಸತ್ತರು ಎಂದು ಯತ್ನಾಳ ಹೇಳಿರುವುದು ಶುದ್ಧ ಸುಳ್ಳು. ಸನಾತನಿಗಳನ್ನು ವೈಭವೀಕರಿಸಲು, ಪ್ರಚಾರದ ಹುಚ್ಚಿಗೆ ತಪ್ಪು ಮಾತನಾಡಬಾರದು. ಬಸವಣ್ಣನವರ ಜೀವನ, ವಚನಗಳನ್ನು ಕುರಿತು ಅಧ್ಯಯನ ಮಾಡುವ ಕೆಲಸವನ್ನು ಮಾಡಬೇಕು.

ಬಸವಣ್ಣನಿಗೆ ಜನ್ಮ ಕೊಟ್ಟ ಜಿಲ್ಲೆಯಲ್ಲಿಯೇ ಬಸವಣ್ಣನ ಹೆಸರು ಇಟ್ಟುಕೊಂಡು ಬದುಕುತ್ತಿರುವ ನಿಮ್ಮಗೆ ಬಸವಣ್ಣನ ಚರಿತ್ರೆ ಅರಿಯುವ ಕೆಲಸ ಮಾಡಿ, ಇತಿಹಾಸಕ್ಕೆ ಅಪಚಾರ ಮಾಡುವ ಕಾರ್ಯಮಾಡಬೇಡಿ. ಬಸವಣ್ಣನ ಕುರಿತು ಮಾತನಾಡುವಾಗ ಎಚ್ಚರಿಗೆ ಇರಬೇಕು. ಇಲ್ಲವಾದರೆ ಎಲ್ಲ ಬಸವಾಭಿಮಾನಿಗಳು ತಕ್ಕ ಉತ್ತರವನ್ನು ಮುಂದಿನ ದಿನದಲ್ಲಿ ಕೊಡುವರು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net