

ಮಹಾಲಿಂಗಪುರ: ಜಗದ್ಗುರು ಸಿದ್ಧಾರೂಢರು ಅನನ್ಯ ಭಕ್ತಿ, ಶ್ರದ್ಧೆಯುಳ್ಳ ಭಕ್ತರ ಪಾಲಿನ ಕಾಮಧೇನು ಆಗಿದ್ದಾರೆ ಎಂದು ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ ಸಹಜಯೋಗಿ ಸಹಜಾನಂದ ಸ್ವಾಮಿಗಳು ಹೇಳಿದರು.
ಪಟ್ಟಣದ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಶನಿವಾರ ರಾತ್ರಿ ಜರುಗಿದ 213ನೇ ವಾರದ ಸತ್ಸಂಗ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಜಾತ್ಯಾತೀತ ಜಗದ್ಗುರು ಸಿದ್ಧಾರೂಢರು ಪವಾಡ ಪುರುಷರಾಗಿದ್ದು, ಅವರ ಕಥಾಮೃತ ರಚನೆಯಾಗಿ ಶತಮಾನೋತ್ಸವ ಕಂಡಿದೆ. ಸಿದ್ಧಾರೂಢರಲ್ಲಿ ಅಪಾರ ನಂಬಿಕೆ, ವಿಶ್ವಾಸ, ಭಕ್ತಿ ಇಟ್ಟು ನಿತ್ಯ ಅವರ ಚರಿತ್ರೆ ಪಾರಾಯಣ ಮಾಡುವುದರಿಂದ ಸಕಲ ಪಾಪಗಳು ಪರಿಹಾರವಾಗಿ ಭಕ್ತರು ಬಯಸಿದ ಇಷ್ಟಾರ್ಥಗಳು ನೆರವೇರುತ್ತವೆ ಎಂದರು.
ಆಶ್ರಮದ ಉತ್ತರಾಧಿಕಾರಿ ಸಿದ್ಧಾನಂದ ಭಾರತಿ ಸ್ವಾಮೀಜಿ, ಟ್ರಸ್ಟ್ ಧರ್ಮದರ್ಶಿ ಶರಣ ಮಲ್ಲೇಶಪ್ಪ ಕಟಗಿ, ಶರಣ ಸಿದ್ರಮಯ್ಯ ಗೋಠೆ ಅವರು ಸಿದ್ಧಾರೂಢರ ಚರಿತ್ರೆಯ 45ನೇ ಅಧ್ಯಾಯವನ್ನಾಧರಿಸಿ ಮಾತನಾಡಿದರು.
ಜಾನಪದ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾದ ಗಂಗಪ್ಪ ಕರಡಿ, ನೂತನ ನ್ಯಾಯವಾದಿಗಳಾಗಿ ನೇಮಕರಾದ ಶಿವಾನಂದ ಹುಣಶ್ಯಾಳ, ಮಹಾಲಿಂಗ ಗೋಕಾಂವಿ ಅವರನ್ನು ಆಶ್ರಮದ ವತಿಯಿಂದ ಸನ್ಮಾನಿಸಲಾಯಿತು.
213ನೇ ವಾರದ ಸತ್ಸಂಗದ ದಾಸೋಹಿ ಸಂಜು ಗುರುಪಾದಪ್ಪ ಹಿಕಡಿ ಅವರು ಸರ್ವ ಪೂಜ್ಯರನ್ನು ಸನ್ಮಾನಿಸಿ ಗೌರವಿಸಿದರು. ಬುದ್ನಿಪಿಡಿ ಮಹಾಲಿಂಗೇಶ್ವರ ಭಜನಾ ಮೇಳದವರಿಂದ ಭಜನಾ ಕಾರ್ಯಕ್ರಮ ಜರುಗಿತು.
ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮ ಟ್ರಸ್ಟ್ ಕಮಿಟಿ ಉಪಾಧ್ಯಕ್ಷ ಡಾ.ಬಿ.ಡಿ. ಸೋರಗಾಂವಿ, ಖಜಾಂಚಿ ಅಲ್ಲಪ್ಪ ಗುಂಜಿಗಾಂವಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಮೋರೆ, ಧರ್ಮದರ್ಶಿಗಳಾದ ಲಕ್ಕಪ್ಪ ಚಮಕೇರಿ, ಚೇತನ ಹಾದಿಮನಿ, ಗೋಲೇಶ ಅಮ್ಮಣಗಿ, ಬಸವರಾಜ ಕರೆಹೊನ್ನ, ಎಸ್.ಕೆ. ಗಿಂಡೆ, ಚನ್ನಬಸು ಹುರಕಡ್ಲಿ, ಯಲ್ಲನಗೌಡ ಪಾಟೀಲ, ಹಣಮಂತ ಮೀರಾಪಟ್ಟಿ, ಮಹೇಶ ಇಟಕನ್ನವರ, ಶಿವಾನಂದ ಪಟ್ಟೇದ, ಶ್ರೀಶೈಲಪ್ಪ ಉಳ್ಳೇಗಡ್ಡಿ, ಉದ್ದಪ್ಪ ನೀಲಾರಿ, ಮೆಹಬೂಬ ಸನದಿ, ಸಂಗಪ್ಪ ಮುತ್ತನಾಳ, ಹುಮಾಯೂನ ಸುತಾರ, ಶಂಕರ ನೀಲಾರಿ, ಚನ್ನಪ್ಪ ಗೂಗಾಡ, ಚನ್ನಪ್ಪ ಚಂಡೋಲ, ಮಲ್ಲಪ್ಪ ಯಾದವಾಡ, ಕುಮಾರ ಉಳ್ಳಾಗಡ್ಡಿ, ಶಿವಾನಂದ ತೇಲಿ, ಸದಾಶಿವ ಮಠಪತಿ, ಸಿದ್ದು ಧಡೂತಿ, ಆನಂದ ಕೋಲಾರ ಮತ್ತಿತರರಿದ್ದರು.