ಪ್ರಕಾಶ ರಾಜ್ ಅವರ ಅಪ್ಪ-ಅಪ್ಪನಿಗೆ ಹುಟ್ಟಿದ್ದಾನೆ ಎಂಬುದಕ್ಕೆ ಗ್ಯಾರಂಟಿ ಏನು?; ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಲೇವಡಿ

07BGKSESHWARAPPAKALABURAGI.png
Published on

ವಿಜಯಪುರ: ಸನಾತನ ಧರ್ಮದ ವಿಚಾರದಲ್ಲಿ ಇಲ್ಲಸಲ್ಲದ ಮಾತನಾಡುವ ಪ್ರಕಾಶ ರಾಜ್ ಒಬ್ಬ ಅಯೋಗ್ಯ. ಆತ ತಮ್ಮ ಅಪ್ಪ-ಅಮ್ಮನಿಗೆ ಹುಟ್ಟಿದ್ದಾನೆಂಬುದಕ್ಕೆ ಏನು ಗ್ಯಾರಂಟಿ? ಅವರ ತಾಯಿ ಬಗ್ಗೆ ನನಗೆ ತುಂಬ ಗೌರವವಿದೆ. ಆದರೆ, ಆತ ಅಪ್ಪ-ಅಮ್ಮನಿಗೆ ಹುಟ್ಟಿದ ಬಗ್ಗೆ ಅವರ ಅಪ್ಪ-ಅಮ್ಮ ಹೇಳಿದ ಮೇಲೆಯೇ ಅಲ್ಲವಾ ಈತನಿಗೆ ಗೊತ್ತಾಗಿದ್ದು? ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಉದಯನಿಧಿ ಒಬ್ಬ ಅಯೋಗ್ಯ. ಹುಚ್ಚ. ಈತನಿಗೂ ಸನಾತನ ಧರ್ಮಕ್ಕೂ ಏನು ಸಂಬಂಧ? ಸನಾತನ ಧರ್ಮ ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಸಾಧು-ಸಂಥರ ತಪ್ಪಸ್ಸಿನಿಂದ ಸನಾತನ ಧರ್ಮ ಉದಯವಾಗಿದೆ. ಧರ್ಮವನ್ನು ಮುಟ್ಟಿದವನು ಯಾವನೂ ಉದ್ದಾರ ಆಗಿಲ್ಲ. ಸಾಧು-ಸಂತರ ತಪಸ್ಸಿನಿಂದ ಸನಾತನ ಧರ್ಮವಾಗಿದೆ. ಧರ್ಮವನ್ನ ಮುಟ್ಟಿದವನು ಯಾವನೂ ಉದ್ಧಾರ ಆಗಲ್ಲ. ಸನಾತನ ಧರ್ಮದ ನಾಶ ಅವರಪ್ಪ, ಅಜ್ಜನಿಂದಲೂ ಆಗಿಲ್ಲ, ಆಗೋದು ಇಲ್ಲ. ಯಾರು ಧರ್ಮ ವಿರುದ್ಧ ರಾಕ್ಷಸಿ ಪ್ರವೃತ್ತಿ ತೋರಿಸಿದ್ದಾರೊ ಅವರು ನಾಶವಾಗಿ ಹೋಗ್ತಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಅಲ್ಲದೇ, ಗೃಹ ಸಚಿವ ಜಿ. ಪರಮೇಶ್ವರ ತಾಕತ್ತು ಇದ್ದರೆ ಮುಸಲ್ಮಾನರ ಹುಟ್ಟಿನ ಬಗ್ಗೆ ಪ್ರಶ್ನಿಸಲಿ. ಮುಸ್ಲಿಂರು ಎಲ್ಲಿ ಹುಟ್ಟಿದ್ರು, ಎಲ್ಲಿಂದ ಬಂದ್ರು ಪ್ರಶ್ನಿಸಲಿ. ಮೈ ಮೇಲೆ ಜ್ಞಾನ ಇಟ್ಟುಕೊಂಡು ಬಾಯಿ ಬಿಡಬೇಕು ಎಂದು ಪರಮೇಶ್ವರ ವಿರುದ್ದ ವಾಗ್ದಾಳಿ ನಡೆಸಿದರು.

ಹಿಂದುತ್ವದ ಬಗ್ಗೆ ಶಾಸಕ ಯತ್ನಾಳ ಶೇ.90ಜೋರದಾರ ಮಾತನಾಡುತ್ತಾರೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ ನಿಜವಾದ ಗಂಡು. ಯತ್ನಾಳ ನಮ್ಮ ಲೀಡರ್. ಇದು ನನಗೆ ಖುಷಿ ಇದೆ. ಆದ್ರೇ, ಶೇ.10 ಮಾತ್ರ ಆಚೆ ಈಚೆ ಮಾತನಾಡುತ್ತಾರೆ. ಅದನ್ನು ನಾವು ಸರಿ ಪಡಿಸುತ್ತೇವೆ ಎಂದರು.
ಪ್ರದೀಪ ಶೆಟ್ಟರ್ ಒಂದು ಹೆಜ್ಜೆ ಹೊರಗಿಟ್ಟಿದ್ದಾರೆ:

ಇನ್ನು ಬಿಜೆಪಿಯಲ್ಲಿ ಲಿಂಗಾಯತರನ್ನು ತುಳಿಯಲಾಗುತ್ತಿದೆ ಎಂಬ ಪ್ರದೀಪ ಶೆಟ್ಟರ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಜಗದೀಶ ಶೆಟ್ಟರ್ ಸಿಎಂ ಆಗಿದ್ದಾಗ ಇವರು ಏಕೆ ಸುಮ್ಮನಿದ್ದರು? ಪ್ರದೀಪ ಶೆಟ್ಟರ್ ಈಗಾಗಲೇ ಒಂದು ಕಾಲು ಹೊರಗಿಟ್ಟಿದ್ದಾರೆ. ಅದಕ್ಕಾಗಿಯೇ ಹಾಗೆ ಹೇಳುತ್ತಿದ್ದಾರೆ. ಹೋಗುವವರು ಹೋಗಲಿ ಎಂದರು.

ಬಿಜೆಪಿ ಯಾವುದೇ ಜಾತಿಯನ್ನು ಉದ್ದಾರ ಮಾಡಲು ಹೋಗಿಲ್ಲ, ತುಳಿಯಲೂ ಹೋಗಿಲ್ಲ. ಸಿದ್ದರಾಮಯ್ಯ ಕುರುಬರ ಸಮಾವೇಶ ಮಾಡಿದರು. ಡಿ.ಕೆ. ಶಿವಕುಮಾರ ಒಕ್ಕಲಿಗರ ಸಮಾವೇಶ ಮಾಡಿದರು. ಆದರೆ ಬಿಜೆಪಿಯಲ್ಲಿ ಯಾವುದೇ ಜಾತಿ ಸಮಾವೇಶ ಮಾಡಿಲ್ಲ. ಇಲ್ಲಿ ಇರುವವರೆಲ್ಲರೂ ಹಿಂದು ಧರ್ಮದವರೇ. ಜಗದೀಶ ಶೆಟ್ಟರ ಅವರಂಥವರು ತಾಯಿಯನ್ನು ಒದ್ದು ಹೊರಗೆ ಹೋದವರು. ಪ್ರದೀಪ ಶೆಟ್ಟರ್ ಕೂಡ ಒಂದು ಹೆಜ್ಜೆ ಹೊರಗಿಟ್ಟಿದ್ದಾರೆ ಎಂದರು.

ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ವಿಜುಗೌಡ ಪಾಟೀಲ, ಸಂಜೀವ ಐಹೊಳೆ, ಕಾಸುಗೌಡ ಬಿರಾದಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net