ವೈಯಕ್ತಿಕ ಆಸಕ್ತಿಗೆ ಕಾರಣ ಏನು?

KC Veerendra puppy
Published on

ಚಿತ್ರದುರ್ಗ: ಉದ್ದೇಶಿತ ಸ್ಥಳದಲ್ಲೇ ಕಾಲೇಜು ನಿರ್ಮಾಣವಾಗಲಿದೆ. ಈ ವಿಷಯದಲ್ಲಿ ನೀವು ಅನಗತ್ಯ ಗೊಂದಲ ಹುಟ್ಟುಹಾಕಬೇಡಿ ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರು ವಿಶೇಷಾಧಿಕಾರಿ ಡಾ.ಯುವರರಾಜ್ ಅವರಿಗೆ ಸೂಚಿಸಿದರು.

ಜಿಪಂ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಸರ್ಕಾರಿ ಆಸ್ಪತ್ರೆ ಆವರಣದಲ್ಲಿಯೇ ಕಾಲೇಜ್ ನಿರ್ಮಾಣ ಆಗಲಿದೆ ಎಂದರು.

ವೀರೇಂದ್ರ ಪಪ್ಪಿ ಮಾತಿಗೆ ಸಚಿವ ಡಿ.ಸುಧಾಕರ್, ಶಾಸಕರಾದ ಟಿ.ರಘುಮೂರ್ತಿ, ಬಿ.ಜಿ.ಗೋವಿಂದಪ್ಪ, ಎಂ.ಚಂದ್ರಪ್ಪ ಸಹಮತ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net