ಸಿಎಂ, ಡಿಸಿಎಂ ಚರ್ಚೆಯಿಂದ ಜನರಿಗೇನು ಪ್ರಯೋಜನ : ಸಚಿವ ಕೃಷ್ಣಭೈರೇಗೌಡ ಪ್ರಶ್ನೆ

krishna Byire Gowda 01
Published on

ಮೈಸೂರು: ಯಾರು ಯಾವಾಗ ಮುಖ್ಯಮಂತ್ರಿ ಆಗಬೇಕು, ಉಪಮುಖ್ಯಮಂತ್ರಿ ಆಗಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಆ ತೀರ್ಮಾನ ನಮ್ಮ ಕೈಯಲ್ಲಿ ಇರುವುದಿಲ್ಲ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದರು.

ಐದು ವರ್ಷವೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ರೀತಿಯ ಚರ್ಚೆಗಳಿಂದ ಜನರಿಗೆ ಯಾವುದೇ ಪ್ರಯೋಜನವಿಲ್ಲ. ಈ ರೀತಿಯ ವಿಚಾರ ಹೇಳಿ ಚರ್ಚೆಗೆ ಅವಕಾಶ ಕೊಡಬೇಡಿ ಎಂದು ಅವರಿಗೆ ಸೂಚನೆ ನೀಡುವ ಸ್ಥಾನದಲ್ಲಿ ನಾನು ಇಲ್ಲ. ನನ್ನ ಮನವಿ, ಸಲಹೆ ಇಷ್ಟೇ. ಇಂತಹ ವಿಚಾರಕ್ಕಿಂತ ಅಭಿವೃದ್ಧಿ ವಿಚಾರಗಳ ಚರ್ಚೆ ಆಗಲಿ ಅಷ್ಟೇ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net