ಮಂಗಳಮುಖಿಯರ ವೇಷ ತೊಟ್ಟವನಿಗೆ ಅಸಲಿ ಮಂಗಳ ಮುಖಿರು ಮಾಡಿದ್ದೇನು...?

Mangalamukhi News
Published on

ಯಲ್ಲಾಪುರ: ಮಂಗಳಮುಖಿಯ ವೇಷ ಹಾಕಿಕೊಂಡು ಜನರನ್ನು ಪೀಡಿಸಿ, ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಅಸಲಿ ಮಂಗಳಮುಖಿಯರು ಧರ್ಮದೇಟು ನೀಡಿದ ಘಟನೆ ಪಟ್ಟಣದ ಬಸ್ ನಿಲ್ದಾಣದ ಬಳಿ ಸೋಮವಾರ ನಡೆದಿದೆ.

ಪುರುಷನೊಬ್ಬ ಮಂಗಳಮುಖಿ ವೇಷ ಧರಿಸಿ ಕಳೆದ 3 ವರ್ಷಗಳಿಂದ ಯಲ್ಲಾಪುರದಲ್ಲಿ ಓಡಾಡುತ್ತ, ಜನರನ್ನು ಹೆದರಿಸುತ್ತ ಹಣ ವಸೂಲಿ ಮಾಡುತ್ತಿದ್ದ.

ಅಂಗಡಿಕಾರರು, ಸಾರ್ವಜನಿಕರು ನಿಜವಾದ ಮಂಗಳಮುಖಿ ಎಂದೇ ತಿಳಿದು, ಹಣ ನೀಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಈತನ ಉಪಟಳ ಮಿತಿ ಮೀರಿತ್ತು. ಪೊಲೀಸರಲ್ಲಿ ದೂರಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಕಳೆದ ವಾರವಷ್ಟೇ ಹುಬ್ಬಳ್ಳಿಯಿಂದ ಬಂದ ಮಂಗಳಮುಖಿಯರಿಬ್ಬರು ಈತನ ಬಟ್ಟೆ ಬಿಚ್ಚಿಸಿ, ಥಳಿಸಿದ್ದರು. ಅದಾದ ನಂತರ ಇದೇ ವ್ಯಕ್ತಿ ಅಂಕೋಲಾದಲ್ಲಿ ಚಲಿಸುತ್ತಿದ್ದ ರೈಲಿನಿಂದ ಯುವಕನೊಬ್ಬನನ್ನು ದೂಡಿ ಗಲಾಟೆ ಮಾಡಿ, ಏಟು ತಿಂದು ಬಂದಿದ್ದ.

ಸೋಮವಾರ ಹುಬ್ಬಳ್ಳಿಯಿಂದ ಬಂದ ಮಂಗಳಮುಖಿಯರು ಈ ವ್ಯಕ್ತಿಗೆ ಧರ್ಮದೇಟು ಹಾಕಿದ್ದಾರೆ. ಮಂಗಳಮುಖಿ ಎಂದು ಹೇಳಿಕೊಂಡು ಜನರಿಂದ ಹಣ ವಸೂಲಿ ಮಾಡುತ್ತಿದ್ದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ಬಸ್ ನಿಲ್ದಾಣದ ಬಳಿ ಸಾರ್ವಜನಿಕರ ಎದುರೇ ಆತನನ್ನು ವಿವಸ್ತ್ರಗೊಳಿಸಿ, ಆತ ಪುರುಷ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇನ್ನೊಮ್ಮೆ ಈ ರೀತಿ ಮುಂದುವರಿಸದಂತೆ ಎಚ್ಚರಿಕೆಯನ್ನೂ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net