

ಶೃಂಗೇರಿ: ಧನುರ್ಮಾಸದ ಆರ್ದ್ರಾ ನಕ್ಷತ್ರವಾದ ಸೋಮವಾರ ಶ್ರೀಮಠದಲ್ಲಿ ಆರ್ದ್ರೋತ್ಸವ ನಡೆಯಿತು. ಬೆಳಗ್ಗೆ ಈಶ್ವರಗಿರಿ ಶ್ರೀಮಲಹಾನಿಕರಾಶ್ವರ ಸ್ವಾಮಿಗೆ ಅಭಿಷೇಕ, ವಿಶೇಷ ಪೂಜೆ ನೆರವೇರಿತು. ಶೃಂಗೇರಿ ಮಠದ ಜಗದ್ಗುರು ಶ್ರೀವಿಧುಶೇಖರ ಭಾರತೀ ಸ್ವಾಮೀಜಿ ಅವರು ಪೂಜೆಯಲ್ಲಿ ಭಾಗಿಯಾದರು. ನಂತರ ಭವಾನೀ ಮಲಹಾನಿಕರೇಶ್ವರ ಸ್ವಾಮಿಗೆ ಗಿರಿಪ್ರದಕ್ಷಿಣೆ, ಈಶ್ವರಗಿರಿಯಿಂದ ಶ್ರೀಮಠದ ತನಕ ಉತ್ಸವ ನೆರವೇರಿತು. ಶ್ರೀಚಂದ್ರಶೇಖರಭಾರತೀ ಸಭಾಂಗಣದಲ್ಲಿ ಶ್ರೀಮಲಹಾನಿಕರೇಶ್ವರ ಸ್ವಾಮಿಗೆ ವಿಶೇಷ ಪೂಜೆ ನೆರವೇರಿತು. ಉತ್ಸವದಲ್ಲಿ ಶ್ರೀಮಲಹಾನಿಕರೇಶ್ವರ ಸ್ವಾಮಿಯನ್ನು ಈಶ್ವರ ಗಿರಿಗೆ ತೆಗೆದುಕೊಂಡು ಹೋಗಲಾಯಿತು. ಶ್ರೀಮಠದ ಪಾಠಶಾಲೆ ವಿದ್ಯಾರ್ಥಿಗಳು ಶಿವಾನಂದ ಲಹರೀ ಸ್ತೋತ್ರಗಳನ್ನು ಪಠಿಸಿದರು. ಭಾನುವಾರ ರಾತ್ರಿ ಶ್ರೀಮಠದ ಆವರಣದಲ್ಲಿ ಅಂಧಕಾಸುರವಧೆ ನಡೆಯಿತು.