

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಸೋಮವಾರ ಆರಂಭಗೊಂಡ ಶ್ರೀ ಅಜಿತ ವಾಡೇಕರ್ ಟ್ರೋಫಿ-ರಾಷ್ಟ್ರ ಮಟ್ಟದ ದೈಹಿಕ ಅಂಗವಿಕಲರ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ವೆಸ್ಟರ್ನ್ ರೇಂಜರ್ಸ್ ತಂಡ ಆಡಿದ ಎರಡೂ ಪಂದ್ಯಗಳಲ್ಲಿ ಜಯ ಗಳಿಸಿ ಮೇಲುಗೈ ಸಾಧಿಸಿದೆ.
ದೇಶಪಾಂಡೆನಗರ ಕೆಜಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ವೆಸ್ಟರ್ನ್ ರೇಂಜರ್ಸ್, ನಾರ್ಥರ್ನ್ ಪ್ರಾಂಟಿಯರ್ಸ್ ವಿರುದ್ಧ 82ರನ್ಗಳಿಂದ ಹಾಗೂ ಈಸ್ಟರ್ನ್ ಈಗಲ್ಸ್ ವಿರುದ್ಧ 4 ವಿಕೆಟ್ಗಳಿಂದ ಜಯ ಗಳಿಸಿತು.
ಸಂಕ್ಷಿಪ್ತ ಸ್ಕೋರ್
ಈಸ್ಟರ್ನ್ ಈಗಲ್ಸ್: 9ವಿಕೆಟ್ಗೆ 139 (ಮಹೇಶ ಷಾ 48, ಯಶ ರಾಠೋಡ್ 19ಕ್ಕೆ2). ವೆಸ್ಟರ್ನ್ ರೇಂಜರ್ಸ್: 6ವಿಕೆಟ್ಗೆ 140 (ಮಯೂರೇಶ ಸನ್ಸಾರೆ 53ಅ, ಮಹೇಶ ಷಾ 37ಕ್ಕೆ2).
ಸೆಂಟ್ರಲ್ ಕಮಾಂಡೋಸ್: 89ಕ್ಕೆ ಆಲೌಟ್ (ಅಜರ್ ಮೊಹಮ್ಮದ್ 22, ಗಟ್ಟು ಋತ್ವಿಕ್ 24ಕ್ಕೆ3, ಹಫಿದ್ ಮೊಹಮ್ಮದ್ 12ಕ್ಕೆ2). ಬೋರ್ಡ್ ಪ್ರೆಸಿಡೆಂಟ್ ಬ್ಲಾಸ್ಟರ್ಸ್: 41ಕ್ಕೆ ಆಲೌಟ್ (ಅಜಯ ರಾವತ್ 8, ರಾಕೇಶ ಠಾಕೂರ್ 7ಕ್ಕೆ5, ಗಜಾನನ ರೋಕಡೆ 1ಕ್ಕೆ2).
ನಾರ್ಥರ್ನ್ ಪ್ರಾಂಟಿಯರ್ಸ್: 6ವಿಕೆಟ್ಗೆ 185 (ವಿಜಯಕುಮಾರ 65, ಯಶ್ 32ಅ, ಅನಂತ ಪಟಲೆ 31ಕ್ಕೆ4), ಸಿ.ಎಸ್. ಇನ್ಪೋಕಾಮ್ ಚಾಲೆಂಜರ್ಸ್: 92ಕ್ಕೆ ಆಲೌಟ್ (ಲಡ್ಡಿ ಮಳುಕ 19, ಸುರ್ಜಿತ್ 14ಕ್ಕೆ4).
ವೆಸ್ಟರ್ನ್ ರೇಂಜರ್ಸ್: 9ವಿಕೆಟ್ಗೆ 169 (ಸೋಮನಾಥ ನಲವಾಡೆ 42, ಅಮಿತ ಸಚದೇವ 20ಕ್ಕೆ3). ನಾರ್ಥರ್ನ್ ಪ್ರಾಂಟಿಯರ್ಸ್: 87ಕ್ಕೆ ಆಲೌಟ್ (ಯಶ 16, ರಾಜೇಶ ಸುರ್ವೆ 5ಕ್ಕೆ2, ಯಶ ರಾಠೋಡ್ 12ಕ್ಕೆ2).
ಬೋರ್ಡ್ ಪ್ರೆಸಿಡೆಂಟ್ ಬ್ಲಾಸ್ಟರ್ಸ್: 4 ವಿಕೆಟ್ಗೆ 143 (ಮೆಹ್ತಾಬ್ ಅಲಿ 38, ಸತೀಶಕುಮಾರ ಮಾಳೋದೆ 36). ಅಜಿತ ವಾಡೇಕರ್ ವಾರಿಯರ್ಸ್: 97ಕ್ಕೆ ಆಲೌಟ್ (ವಿಕಾಸ ಯಾದವ 21, ಗಟ್ಟು ಋತ್ವಿರ್ 17ಕ್ಕೆ4, ಸತೀಶಕುಮಾರ ಮಾಳೋದೆ 11ಕ್ಕೆ3).
ಸೌಥರ್ನ್ ಸ್ಮ್ಯಾಷರ್ಸ್: 6ವಿಕೆಟ್ಗೆ 192 (ಎಂ. ಸುಗಣೇಶ 99ಅ, ನರೇಂದ್ರ ಮಾಂಗೋರೆ 29, ಅವನೀಶ ಕುಮಾರ 50ಕ್ಕೆ2). ಸೆಂಟ್ರಲ್ ಕಮಾಂಡೋಸ್: 57ಕ್ಕೆ ಆಲೌಟ್ (ಅವನೀಶ ಕುಮಾರ 21, ಕೃಷ್ಣ ಬಗಾಡಿ 13ಕ್ಕೆ4).