ರೈಲು ಮಾರ್ಗದಲ್ಲಿ ಭೂಕುಸಿತ

01020102
Published on

ಖಾನಾಪುರ: ಪಶ್ಚಿಮಘಟ್ಟದ ಅರಣ್ಯ ಪ್ರದೇಶದಲ್ಲಿ ಮಳೆ ಸುರಿಯುತ್ತಿರುವುದರಿಂದ ಲೋಂಡಾ-ಹುಬ್ಬಳ್ಳಿ ರೈಲು ಮಾರ್ಗದ ಶಿವಠಾಣ ರೈಲು ನಿಲ್ದಾಣದ ಬಳಿ ಭೂಕುಸಿತವಾಗಿದೆ. ಲೋಂಡಾ-ನಾಗರಗಾಳಿ ಮಾರ್ಗ ಮಧ್ಯದ 554ನೇ ಕಿ.ಮೀ. ಬಳಿ ಜೋಡು ರೈಲು ಮಾರ್ಗದ ಪೈಕಿ ಉತ್ತರ ದಿಕ್ಕಿನ ಒಂದು ಮಾರ್ಗದ ಪಕ್ಕದ ಭೂಮಿ ಸೋಮವಾರ ನಸುಕಿನಲ್ಲಿ ಕುಸಿದಿದೆ ಎಂದು ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ.

ಗೋವಾ ಮತ್ತು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಆಗಮಿಸುವ ಗೂಡ್ಸ್ ರೈಲುಗಳನ್ನು ಲೋಂಡಾ ನಿಲ್ದಾಣದಲ್ಲಿ ಮತ್ತು ಹುಬ್ಬಳ್ಳಿಯಿಂದ ಮಹಾರಾಷ್ಟ್ರ ಹಾಗೂ ಗೋವಾದತ್ತ ತೆರಳುವ ರೈಲುಗಳನ್ನು ಅಳ್ನಾವರ ಮತ್ತು ನಾಗರಗಾಳಿ ನಿಲ್ದಾಣಗಳಲ್ಲಿ ತಡೆಹಿಡಿಯಲಾಗಿದೆ. ಜೋಡಿ ರೈಲು ಮಾರ್ಗದ ಪೈಕಿ ಒಂದು ಮಾರ್ಗದಲ್ಲಿ ಪ್ರತಿ ಗಂಟೆಗೆ 10 ಕಿ.ಮೀ. ವೇಗದಲ್ಲಿ ರೈಲು ಓಡಿಸಲಾಗುತ್ತಿದೆ ಎಂದು ಶಿವಠಾಣ ರೈಲು ನಿಲ್ದಾಣ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net