ವೆನ್ಲಾಕ್ ರೋಗಿಗಳೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸಬೇಕು

ವೆನ್ಲಾಕ್ ಆಸ್ಪತ್ರೆ
ವೆನ್ಲಾಕ್ ಆಸ್ಪತ್ರೆ
Published on

ಪ್ರಮುಖ ಮುಖ್ಯಾಂಶಗಳು

  • ಕನ್ನಡದಲ್ಲಿ ವ್ಯವಹರಿಸದೇ ಇರುವುದರಿಂದ ರೋಗಿಗಳಿಗೆ ತೊಂದರೆ
  • ಕಡ್ಡಾಯವಾಗಿ 3 ತಿಂಗಳ ಒಳಗೆ ಕನ್ನಡವನ್ನು ಕಲಿಯಲೇಬೇಕು
  • ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕರ ಸೂಚನೆ

ಮಂಗಳೂರು: ವೆನ್ಲಾಕ್ ಜಿಲ್ಲಾಸ್ಪತ್ರೆಗೆ ದಕ್ಷಿಣ ಕನ್ನಡ ಹಾಗೂ ಇತರ ಜಿಲ್ಲೆಗಳಿಂದ ಹೆಚ್ಚಾಗಿ ಕನ್ನಡ ಮಾತನಾಡುವ, ಇತರ ಭಾಷೆಗಳ ಅರಿವಿಲ್ಲದ ಶೇ. 90 ರೋಗಿಗಳು ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಆಸ್ಪತ್ರೆಯ ಕೆಲವು ವೈದ್ಯರು, ಸ್ನಾತಕೋತ್ತರ ವಿದ್ಯಾರ್ಥಿಗಳು ಕನ್ನಡದಲ್ಲಿ ವ್ಯವಹರಿಸದೇ ಇರುವುದರಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ.

ಕೆಲವು ವೈದ್ಯರುಗಳು ಹಾಗೂ ವಿದ್ಯಾರ್ಥಿಗಳು ರೋಗಿಗಳಿಗೆ/ರೋಗಿಗಳ ಸಂಬಂಧಿಕರಿಗೆ ಚಿಕಿತ್ಸೆಯ ವಿಧಾನ ಮತ್ತು ಪ್ರಗತಿಯ ಮಾಹಿತಿಯನ್ನು ತಿಳಿಸದೇ ಇರುವ ಬಗ್ಗೆಯೂ ಸಾಕಷ್ಟು ದೂರುಗಳು ಬರುತ್ತಿವೆ. ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬರುವ ರೋಗಿಗಳೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸಬೇಕು. ಹೊರರಾಜ್ಯದಿಂದ ಬರುವ ವಿದ್ಯಾರ್ಥಿಗಳು ಕಡ್ಡಾಯವಾಗಿ 3 ತಿಂಗಳ ಒಳಗೆ ಕನ್ನಡವನ್ನು ಕಲಿಯಬೇಕು. ಅಲ್ಲಿಯವರೆಗೆ ರೋಗಿಗಳೊಂದಿಗೆ ವ್ಯವಹರಿಸಲು ವಿಭಾಗಗಳಲ್ಲಿರುವ ಇತರ ಸಿಬ್ಬಂದಿಗಳ ಸಹಾಯ ಪಡೆಯುವಂತೆ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕರು ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net