

ಮಡಿಕೇರಿ: ವಿಶ್ವ ಹಿಂದು ಪರಿಷದ್ ವತಿಯಿಂದ ನ೬ರಿಂದ ೨೦ರವರೆಗೆ ಹಿತಚಿಂತಕರ ಅಭಿಯಾನ ನಡೆಯಲಿದೆ ಎಂದು ಪರಿಷದ್ ಅಧ್ಯಕ್ಷ ಕೃಷ್ಣಮೂರ್ತಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ೬ರಿಂದ ನ೨೦ರವರೆಗೆ ಜಿಲ್ಲೆಯಲ್ಲಿ ಹಿತಚಿಂತಕರ ಅಭಿಯಾನ ತಾಲೂಕು ಮಟ್ಟದಲ್ಲಿ ಕಾರ್ಯಕರ್ತರು ಮನೆಮನೆಗೆ ತೆರಳಿ ಜಾಗೃತಿ ಮೂಡಿಸುವ ಮೂಲಕ ನಡೆಯಲಿದೆ. ನ೧೩ರಂದು ಮಹಾ ಅಭಿಯಾನ ಜಿಲ್ಲೆಯಲ್ಲಿ ನಡೆಯಲಿದೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ತಾಲೂಕ್ ಮಠ, ಮಂದಿರ ಪ್ರಮುಖ ಡಾ.ಮಹಾಭಲೇಶ್ವರ ಭಟ್ ಮಾತನಾಡಿ, ಉತ್ತರ ಭಾರತದಲ್ಲಿ ಗಂಗಾಮಾತೆಗೆ ಪ್ರತಿನಿತ್ಯವೂ ಸಂಜೆ ಸೂರ್ಯಸ್ಥಮಾನದಲ್ಲಿ ಹರಿದ್ವಾರ, ರಿಶಿಕೇಶ, ಕಾಶಿಯಲ್ಲಿ ಆರತಿ ನಡೆಸಿಕೊಂಡು ಬಂದ ಪದ್ಧತಿಯಂತೆ ನಮ್ಮ ದಕ್ಷಿಣ ಭಾರತದ ಕಾವೇರಿ ಮಾತೆಗೆ ವೇದಘೋಷ ಭಜನೆ ಹಾಗೂ ಕಾವೇರಿ ಮಾತೆಯ ಅರ್ಚನೆಯೊಂದಿಗೆ ಕಾವೇರಿ ಮಾತಾ ಆರತಿಯನ್ನು ಬೆಳಗಿಸುವ ಕಾರ್ಯಕ್ರಮ ನ೮ರಂದು ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ ೫.೩೦ ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯಧ್ಯಕ್ಷ ಎಸ್.ಸುರೇಶ, ಕಾರ್ಯದರ್ಶಿ ಪುದಿಯೊಕ್ಕಡ ರಮೇಶ್, ಕಾರ್ಯಕ್ರಮ ಸಂಯೋಜಕ ಆರ್.ಮುನಿಕೃಷ್ಣ ಪಾಲ್ಗೊಂಡಿದ್ದರು.