ಬೇವಿನ ಮರ ಬಿದ್ದು ದೇವಸ್ಥಾನ ಜಖಂ

Well tree falls temple Jakham
ದೇವನಾಳದಲ್ಲಿ ನೆಲಕ್ಕೆ ಬಿದ್ದಿರುವ ಗೋವಿನಜೋಳವನ್ನು ಪರಿಶೀಲಿಸುತ್ತಿರುವ ಅಧಿಕಾರಿಗಳು.
Published on

ಕಲಾದಗಿ: ಗ್ರಾಮದಲ್ಲಿ ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಏಕಾಏಕಿ ಆರಂಭವಾದ ಬಿರುಗಾಳಿ ಮತ್ತು ಮಳೆಯಿಂದ ದೇವನಾಳದಲ್ಲಿ ಗೋವಿನಜೋಳ ಬಿರುಗಾಳಿಗೆ ನೆಲಕ್ಕುರುಳಿ ನಷ್ಟವನ್ನುಂಟು ಮಾಡಿದೆ. ಗ್ರಾಮದ ಸಮೀಪದ ಸೈಪೋದ್ದೀನ ಗುಡ್ಡದ ಕೆಳಭಾಗದಲ್ಲಿರುವ ಪುರಾತನವಾದ ಮನಾದಗಿ ಹನುಮಂತ ದೇವರ ದೇವಸ್ಥಾನದ ಮೇಲೆ ಬೇವಿನ ಮರ ಬಿದ್ದ ಪರಿಣಾಮ ದೇವಾಲಯ ಸಂಪೂರ್ಣವಾಗಿ ಜಖಂಗೊಂಡಿದ್ದು, ಚಿಕ್ಕಸಂಶಿಯಲ್ಲಿ ಮನೆಯೊಂದು ಬಿದ್ದಿದೆ.

ದೇವನಾಳ ಪ್ರದೇಶದಲ್ಲಿ ನೆಲಕ್ಕುರುಳಿದ ಗೋವಿನಜೋಳದ ಜಮೀನುಗಳಿಗೆ ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರು ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮದಲ್ಲಿ ಈ ವರ್ಷದ ಮೊದಲ ಮಳೆ 33.4 ಎಂಎಂ.ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net