ಶಿಕ್ಷಣದ ಪ್ರಗತಿಗೆ ಅಂದ, ಶುದ್ಧ ಬರಹ ಪೂರಕ

NRGL KARYAGARA
Published on

ನರೇಗಲ್ಲ: ಸುಸಂಸ್ಕೃತ ಹಾಗೂ ಸುಮಧುರ ಭಾಷೆ ಮನುಷ್ಯನ ಮನಸನ್ನು ಪರಿವರ್ತಿಸುವಂತೆ ಅಂದ ಹಾಗೂ ಶುದ್ಧ ಬರವಣಿಗೆ ಶಿಕ್ಷಣದ ಪ್ರಗತಿಗೆ ಪೂರಕವಾಗಬಲ್ಲದು ಎಂದು ಡಯಟ್ ಉಪನ್ಯಾಸಕ ಕೆ.ಪಿ. ಸಾಲಿಮಠ ಹೇಳಿದರು.

ಪಟ್ಟಣದ ಎಸ್​ಕೆಆರ್​ಕೆ ಸರ್ಕಾರಿ ಪ್ರೌಢಶಾಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಜರುಗಿದ ಪ್ರೌಢಶಾಲಾ ಭಾಷಾ ಶಿಕ್ಷಕರ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಫಲಿತಾಂಶ ಸುಧಾರಣೆಗೆ ಭಾಷಾ ಬುನಾದಿ ಮುಖ್ಯ. ಈ ನಿಟ್ಟಿನಲ್ಲಿ ವಿಷಯ ಶಿಕ್ಷಕರು ವಿದ್ಯಾರ್ಥಿಗಳ ಭಾಷಾ ಸುಧಾರಣೆಗೆ ಹೆಚ್ಚು ಗಮನ ಹರಿಸಬೇಕು. ಶಿಕ್ಷಕರು ಮಕ್ಕಳ ಕಲಿಕೆಯ ಬಗ್ಗೆ ಪಟ್ಟ ಪರಿಶ್ರಮ ಸಾರ್ಥಕವಾಗಬೇಕಾದರೆ ಪಾಲಕರು ಮಕ್ಕಳ ಕಲಿಕೆಯ ಬಗ್ಗೆ ಕಾಳಜಿ ವಹಿಸಬೇಕು ಎಂದರು.

ಮುಖ್ಯ ಶಿಕ್ಷಕ ಎಸ್.ಬಿ. ನಿಡಗುಂದಿ ಮಾತನಾಡಿದರು. ಈ ಸಿ ಓ ಲೋಕೇಶ , ದೈಹಿಕ ಶಿಕ್ಷಣ ಪರಿವೀಕ್ಷಕ ಆರ್.ಎಸ್. ನರೇಗಲ್ಲ, ಶಿಕ್ಷಕಿ ಜೆ.ಎಂ. ಜೋಶಿ, ಎಂ. ವಿ. ಜಾಧವ, ಸಂಪನ್ಮೂಲ ವ್ಯಕ್ತಿ ಡಿ.ಎಸ್. ಬಡಿಗೇರ, ಶಿಕ್ಷಕ ಬಿ.ಟಿ. ತಾಳಿ, ಭೂದಾನಿ ಆನಂದ ಕುಲಕರ್ಣಿ ಇದ್ದರು. ಸಂಪನ್ಮೂಲ ವ್ಯಕ್ತಿ ನಾಗಯ್ಯ ಹಿರೇಮಠ, ಎನ್.ಡಿ. ಪವಾರ, ಸೋಮಶೇಖರ ಹವಾಲ್ದಾರ, ಎಂ.ಎನ್. ಕಾಗದಾಳ, ಇತರರು ತರಬೇತಿ ನೀಡಿದರು. ರೋಣ ಹಾಗೂ ಗಜೇಂದ್ರಗಡ ತಾಲೂಕಿನ ನೂರಾರು ಶಿಕ್ಷಕರು ತರಬೇತಿಯ ಪ್ರಯೋಜನ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net