ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

25Kokatanur5_Web
Published on

ಕೊಕಟನೂರ: ಕುಡಿತದ ಚಟ ಬಿಡುವಂತೆ ಪದೇಪದೆ ಹೇಳಿದರೂ ಮಾತು ಕೇಳದ ಗಂಡನ ವರ್ತನೆಗೆ ಬೇಸತ್ತ ಪತ್ನಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಥಣಿ ತಾಲೂಕಿನ ಕೊಡಗಾನೂರ ಗ್ರಾಮದ ಪ್ರಿಯಾಂಕಾ ಲಕ್ಷ್ಮಣ ಅಟಪಟಕರ (25) ಮೃತ ಮಹಿಳೆ. ಇವರಿಗೆ ಪುತ್ರ, ಪುತ್ರಿ ಇದ್ದಾರೆ. ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net