ಬಾವಿಯಲ್ಲಿ ಬಿದ್ದಿದ್ದ ಶ್ವಾನ ರಕ್ಷಣೆ

27 lxr 3
Published on

ಲಕ್ಷ್ಮೇಶ್ವರ: ತಾಲೂಕಿನ ಗೊಜನೂರ ಗ್ರಾಮದಲ್ಲಿ ತೆರೆದ ಬಾವಿಯೊಂದರಲ್ಲಿ ಆಕಸ್ಮಿಕವಾಗಿ ಬಿದ್ದಿದ್ದ ನಾಯಿಯನ್ನು ಗ್ರಾಮದ ಯುವಕರು ಹೊರ ತೆಗೆದು ಮಾನವೀಯತೆ ಮೆರೆದಿದ್ದಾರೆ. ಗ್ರಾಮದ ದೊಡ್ಮನಿ ಅವರ ಓಣಿಯಲ್ಲಿನ ಹತ್ತಾರು ಅಡಿ ಆಳದ ಗುಬ್ಬಿ ಬಾವಿಯಲ್ಲಿ ನಾಯಿಯೊಂದು ಶುಕ್ರವಾರ ಆಕಸ್ಮಿಕವಾಗಿ ಬಿದ್ದಿದೆ. ಅದನ್ನು ಗಮನಿಸಿದ ಓಣಿಯ ಯುವಕರಾದ ರಮೇಶ ಪುರದ, ರಾಜು ಪಾಟೀಲ, ಶರಣಪ್ಪ ಬಡಿಗೇರ, ಪ್ರಶಾಂತ ಸವಣೂರ ಎಂಬುವವರು ಹಗ್ಗ ಮತ್ತು ಪುಟ್ಟಿಯ ಸಹಾಯದಿಂದ ಶ್ವಾನವನ್ನು ಸುರಕ್ಷಿತವಾಗಿ ಮೇಲೆತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net