ಪ್ರತಿಭಾ ಕಾರಂಜಿಯಲ್ಲಿ ಉತ್ತಮ ಸಾಧನೆ

Well done in the talent fountain
ತಾಳಿಕೋಟೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು.
Published on

ತಾಳಿಕೋಟೆ: ಪಟ್ಟಣದ ಸರ್ವಜ್ಞ ವಿದ್ಯಾಪೀಠ ಹಿರಿಯ ಪ್ರಾಥಮಿಕ ಶಾಲೆಯ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ತಾಳಿಕೋಟೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ ಸ್ಪರ್ಧೆಯ ವೈಯಕ್ತಿಕ ಸ್ಪರ್ಧೆಯಲ್ಲಿ ವಿಜಯಶಾಲಿಯಾಗಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಮಿಮಿಕ್ರಿ ಸ್ಪರ್ಧೆಯಲ್ಲಿ ರಾಮನಗೌಡ ಪಾಟೀಲ ಪ್ರಥಮ, ಕವನ ವಾಚನ ಸ್ಪರ್ಧೆಯಲ್ಲಿ ಭೂಮಿಕಾ ಆಲ್ಯಾಳ ಪ್ರಥಮ, ಭರತನಾಟ್ಯದಲ್ಲಿ ತೋವಣಾ ರಾಠೋಡ ದ್ವಿತೀಯ, ಜಾನಪದ ಗೀತೆಯಲ್ಲಿ ಸುಷ್ಮಿತಾ ಆಲಮಟ್ಟಿ ದ್ವಿತೀಯ, ಧಾರ್ಮಿಕ ಪಠಣ (ಅರೇಬಿಕ)ದಲ್ಲಿ ಬಿ.ಬಿ. ಜೋಹಾಚೌದ್ರಿ ದ್ವಿತೀಯ, ಕಂಠಪಾಠ (ಕನ್ನಡ)ದಲ್ಲಿ ನಿರಿಕ್ಷೀತಾ ಚಿನಗುಡಿ ದ್ವಿತೀಯ, ಕಂಠಪಾಠ (ಇಂಗ್ಲೀಷ) ಪ್ರಿಯಾಂಕಾ ಸರೂರ ದ್ವಿತೀಯ, ಕ್ವಿಜ್ ಶರತ ಹುಗ್ಗಿ, ರಾಧಿಕಾ ಗುಡಿಹಾಳ ದ್ವಿತೀಯ ಸ್ಥಾನ ಪಡೆದಿದ್ದಾರೆ. ಚರ್ಚಾ ಸ್ಪರ್ಧೆಯಲ್ಲಿ ಸ್ನೇಹಾ ಸಜ್ಜನ ತೃತೀಯ, ಭಾವಗೀತೆಯಲ್ಲಿ ಸಹನಾ ಪಾಟೀಲ ತೃತೀಯ, ಧಾರ್ಮಿಕ ಪಠಣ ಸಂಸ್ಕೃತದಲ್ಲಿ ರಾಹುಲ್ ಹೊಸಳ್ಳಿ ತೃತೀಯ ಸ್ಥಾನ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net