ಮುದಗಲ್: ಪಟ್ಟಣದ ಕಿಲ್ಲಾದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ ಅಂತೂರು- ಬೆಂತೂರು ಬೂದೀಶ್ವರ ಸಂಸ್ಥಾನ ಮಠದ ಡಾ.ರಾಚೋಟೇಶ್ವರ ಶಿವಾಚಾರ್ಯರು ಮೌನಾನುಷ್ಠಾನ ಕೈಗೊಂಡಿದ್ದಾರೆ.
ದುಶ್ಚಟಗಳ ಭಿಕ್ಷೆ ಸದ್ಗುಣಗಳ ದೀಕ್ಷೆ, ಉತ್ತಮ ಮಳೆಯಾಗಿ ಸಮೃದ್ಧ ಬೆಳೆ ಬಂದು ರೈತರ ಸಂಕಷ್ಟ ದೂರವಾಗಲು, ನಿರುದ್ಯೋಗ ನಿವಾರಣೆ, ವ್ಯಾಪಾರ-ಉದ್ಯಮಗಳ ಸುರಕ್ಷಿತ ಅಭಿವೃದ್ಧಿ, ದೇಶದಲ್ಲಿ ಶಾಂತಿ ನೆಲೆಸಲು, ದೇಶದ ಗಡಿ ಕಾಯುವ ಸೈನಿಕರಿಗೆ ಶಕ್ತಿ ತುಂಬುವ ಸಂಕಲ್ಪದೊಂದಿಗೆ ಮಾ.2 ರಿಂದ 12ರವರೆಗೆ ಮೌನಾನುಷ್ಠಾನ ಹಮ್ಮಿಕೊಂಡಿದ್ದಾರೆ.
ಅಲ್ಲದೆ ಮಾ.12ರಿಂದ 23ರ ವರೆಗೆ 14ನೇ ಶಿವಯೋಗ ಸಮಾಧಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಗುರುಗುಂಟಾ ಅಮರೇಶ್ವರ ದೇವಸ್ಥಾನದ ಅರ್ಚಕ ವಿದ್ವಾನ್ ಗಂಗಾಧರ ಸ್ವಾಮಿಗಳಿಂದ ಪ್ರತಿದಿನ ಪ್ರಾತಃಕಾಲದಲ್ಲಿ ರುದ್ರಾಭಿಷೇಕ, ಅತಿ ರುದ್ರಯಾಗ, ರಾತ್ರಿ ಶಿವನಾಮ ಭಜನೆ, ಕೊನೆಯ ದಿನ ಮಾ.22ರ ಪ್ರಾತಃಕಾಲದಲ್ಲಿ ಲಕ್ಷ ಬಿಲ್ವಾರ್ಚನೆ ಪೂಜೆ ಕಾರ್ಯಕ್ರಮ ನಡೆಯುತ್ತವೆ ಎಂದು ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.