ದೇವತಾ ಆರಾಧನೆಗಳಿಂದ ಲೋಕ ಕಲ್ಯಾಣ

29 ylp news 02 (anagod)
Published on

ಯಲ್ಲಾಪುರ: ತಾಲೂಕಿನ ಆನಗೋಡ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಆಶಾಢ ಏಕಾದಶಿಯ ಪ್ರಯುಕ್ತ ಗುರುವಾರ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಮಾತೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು. ಇದೇ ವೇಳೆ ಸುದರ್ಶನ ಸೇವಾ ಪ್ರತಿಷ್ಠಾನ ಹಾಗೂ ಷಡ್ಜ ಕಲಾ ಕೇಂದ್ರ ಬೆಂಗಳೂರು ಸಹಯೋಗದಲ್ಲಿ ಸಂತ ಭದ್ರಗಿರಿ ಅಚ್ಯುತದಾಸರ ಸಂಸ್ಮರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ವೇ. ಗಣಪತಿ ಭಟ್ಟ ಕೋಲಿಬೇಣ ಮಾತನಾಡಿ, ಧಾರ್ಮಿಕ ಕ್ಷೇತ್ರಗಳಲ್ಲಿ ನಡೆಯುವ ದೇವತಾರಾಧನೆಗಳಿಂದ ಲೋಕ ಕಲ್ಯಾಣವಾಗುತ್ತದೆ ಎಂದರು.
ಮಂಡ್ಯದ ಮಧುಸೂದನದಾಸ, ಕಾಸರಗೋಡಿನ ರಾಮಕೃಷ್ಣ ಕಾಟಕುಕ್ಕೆ, ಈಶ್ವರದಾಸ ಕೊಪ್ಪೆಸರ, ರಾಮಕೃಷ್ಣ ಭಟ್ಟ ಕವಡಿಕೇರಿ, ಸುದರ್ಶನ ಸೇವಾ ಪ್ರತಿಷ್ಠಾನದ ಗಣಪತಿ ಮಾನಿಗದ್ದೆ ಇತರರಿದ್ದರು. ರಾಜಶೇಖರ ಧೂಳಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net