ಕೃಷ್ಣನ ಸಂದೇಶದಿಂದ ಲೋಕ ಕಲ್ಯಾಣ

CLK SRI KRISHNA 2
Published on

ಚಳ್ಳಕೆರೆ: ಶ್ರೀಕೃಷ್ಣ ಭಗವಂತನ ಶ್ಲೋಕ ಸಂದೇಶಗಳು ವಿಶ್ವಕ್ಕೆ ಕಲ್ಯಾಣ ಬಯಸುವ ಮೌಲ್ಯವಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ಇಸ್ಕಾನ್ ಸಂಸ್ಥೆ ವತಿಯಿಂದ ತ್ಯಾಗರಾಜ ನಗರದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜಯಂತಿ ವಿಶೇಷ ಅಭಿಷೇಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಶ್ರೀಕೃಷ್ಣ ಲೋಕ ಕಲ್ಯಾಣ ಬಯಸಿದ ಧೈವ. ಜೀವ ಸಂಕುಲಗಳ ಸಂಕಷ್ಟಗಳು ಕಾಳಿಂಗನ ಮರ್ದನದಂತೆ ನಾಶವಾಗಲು ಶ್ರೀಕೃಷ್ಣನ ಆರಾಧನೆ ಮನುಕುಲಕ್ಕೆ ಬೇಕಾಗಿದೆ ಎಂದು ಹೇಳಿದರು.

ಶಾಸಕ ಟಿ.ರಘುಮೂರ್ತಿ ಮಾತನಾಡಿ, ಬೃಹತ್ ನಗರಗಳಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳಿಗೆ ಪ್ರಧಾನವಾಗಿರುವ ಇಸ್ಕಾನ್ ಸಂಸ್ಥೆ ತಾಲೂಕು ಹಂತದಲ್ಲಿ ಆಯೋಜಿಸುತ್ತಿರುವುದು ಸಂತಸ ತಂದಿದೆ. ಶ್ರೀಕೃಷ್ಣನ ವಿಚಾರಗಳನ್ನು ಸಮಾಜಕ್ಕೆ ತಿಳಿಸುವ ಜಾಗೃತಿ ಆಗಬೇಕು ಎಂದು ತಿಳಿಸಿದರು.

ಮಕ್ಕಳು ರಾಧೆ, ಕೃಷ್ಣ ವೇಷಧಾರಿಗಳಾಗಿ ಭಕ್ತರ ಗಮನ ಸೆಳೆದರು. ಅರ್ಚಕ ವೆಂಕಟೇಶ್, ಗಂಗಾಧರಶೆಟ್ಟಿ, ಗೋಪಿನಾಥ್, ಶ್ರೀನಿವಾಸುಲು, ನೇತಾಜಿ ಪ್ರಸನ್ನ, ಮಂಜುನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net