ಕಾಂಗ್ರೆಸ್​ನಿಂದ ಮಾತ್ರ ಬಡವರ ಕಲ್ಯಾಣ

Welfare of the poor only by Congress
ಆರ್​. ಧರ್ಮಸೇನಾ, ಕೆಪಿಸಿಸಿ ಎಸ್​ಸಿ ಟಕದ ರಾಜ್ಯಾಧ್ಯಕ್ಷ
Published on

ವಿಜಯಪುರ: "ಉಳುವವನೇ ಹೊಲದೊಡೆಯ' ಯೋಜನೆ ಮೂಲಕ ದಲಿತರಿಗೆ ಅತಿ ಹೆಚ್ಚು ಭೂಮಿ ಹಂಚಿಕೆ ಮಾಡಿದ ಪಕ್ಷ ಕಾಂಗ್ರೆಸ್​ ಎಂದು ವಿಪ ಮಾಜಿ ಸದಸ್ಯ ಹಾಗೂ ಕೆಪಿಸಿಸಿ ಎಸ್​ಸಿ ಟಕದ ರಾಜ್ಯಾಧ್ಯಕ್ಷ ಆರ್​. ಧರ್ಮಸೇನಾ ಹೇಳಿದರು.

ಕಾಂಗ್ರೆಸ್​ ಬಡವರ ಪರ ಪಕ್ಷ. ಬಡವರ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಆದರೆ, ಮೋದಿ ಬಂಡವಾಳ ಶಾಹಿ ಪರ ನಿಂತಿದ್ದಾರೆ.

ವರು ಭಾರತದ ಅಭಿವೃದ್ಧಿ ಎಂದರೆ ಬಂಡವಾಳ ಶಾಹಿಗಳ ಅಭಿವೃದ್ಧಿ ಎಂದುಕೊಂಡಿದ್ದಾರೆಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

ಬಂಗಾರದ ಚಮಚ ಬಾಯಿಯಲ್ಲಿ ಇರಿಸಿಕೊಂಡು ಜನಿಸಿದ ರಾಹುಲ್​ ಗಾಂಧಿ ಬಡವರ ಪರ ನಿಂತಿದ್ದಾರೆ, ರೈತರ ಆದಾಯ ದ್ವಿಗುಣ ಮಾಡುವ ಮಾತು ನೀಡಿದ್ದ ಮೋದಿ ಅವರು ಕಾಲುಭಾಗ ಸಹ ರೈತರ ಆದಾಯ ಏರಿಕೆ ಮಾಡಲಿಲ್ಲ, ಅಷ್ಟೇ ಅಲ್ಲದೇ ರೈತರ ಆತ್ಮಹತ್ಯೆ ಹೆಚ್ಚಾಗುತ್ತಿರುವುದು ನೋವಿನ ಸಂಗತಿ ಎಂದರು.

ದಲಿತರಿಗೆ ನೀಡಲಾಗಿರುವ ಮೀಸಲಾತಿ ತೆಗೆಯುವ ವಿಚಾರವನ್ನು ಬಿಜೆಪಿಯಲ್ಲಿಯೇ ಇರುವ ದಲಿತ ಮುಖಂಡರು ಒಪ್ಪುವುದಿಲ್ಲ, ಡಾ. ಅಂಬೇಡ್ಕರ್​ ಅವರ ಸಮಾಧಿಗೆ ಜಾಗ ನೀಡಲಿಲ್ಲ ಎಂಬ ತಪ್ಪು ಸಂದೇಶ ನೀಡಲು ಬಿಜೆಪಿ ಹೊರಟಿದೆ.

ಡಾ. ಅಂಬೇಡ್ಕರ್​ ಅವರ ಧರ್ಮಪತ್ನಿ ಅವರು ಡಾ. ಅಂಬೇಡ್ಕರ್​ ಅವರ ಅಂತಿಮ ಸಂಸ್ಕಾರವನ್ನು ನಾಗಪುರದಲ್ಲಿಯೇ ನೆರವೇರಿಸಲು ಸರ್ಕಾರಕ್ಕೆ ಅಧಿಕೃತ ಪತ್ರ ಸಲ್ಲಿಸಿದ್ದರು.

ದಲಿತರ ಅಭಿವೃದ್ಧಿಗೆ ಬಿಜೆಪಿ ಕೊಡುಗೆ ಏನು? ಎಂಬುದನ್ನು ಬಹಿರಂಗಪಡಿಸಬೇಕು ಎಂದು ಸಿ.ಟಿ. ರವಿ ಅವರಿಗೆ ಧರ್ಮಸೇನಾ ಸವಾಲು ಹಾಕಿದರು.

ಮುಖಂಡರಾದ ಸುನೀಲ ಉಕ್ಕಲಿ, ಎಐಸಿಸಿ ಸದಸ್ಯೆ ಶ್ರೀದೇವಿ ಉತ್ಲಾಸರ, ಪೀರಪ್ಪ ನಡುವಿನಮನಿ, ಸುಭಾಸ ಗುಡಿಮನಿ, ವಸಂತ ಹೊನಮೋಡೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net