ಹಿಂದು ಧರ್ಮದಿಂದ ಸರ್ವ ಜೀವಗಳ ಕಲ್ಯಾಣ

Welfare of all beings through Hinduism
ಕಲಾದಗಿಯ ಶ್ರೀ ಚಿದಂಬರೇಶ್ವ ಸಭಾಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶೃಂಗೇರಿ ಶ್ರೀ ಶಾರದಾ ಪೀಠದ ಶಂಕರಾಚಾರ್ಯ ಜಗದ್ಗುರು ವಿಧುಶೇಖರಭಾರತಿ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
Published on

ಕಲಾದಗಿ: ವಿಶ್ವಕ್ಕೆ ಮಾದರಿಯಾದ ನಮ್ಮ ಸನಾತನ ಹಿಂದು ಧರ್ಮದ ಉಳಿವಿನಿಂದ ಮಾತ್ರ ಜಗತ್ತಿನ ಸರ್ವ ಜೀವಗಳ ಕಲ್ಯಾಣವಾಗುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ಸನಾತನ ಧರ್ಮ, ಪರಂಪರೆಯ ಜಾಗೃತಿಗಾಗಿ ನಾವೆಲ್ಲ ಸದಾ ಬದ್ಧರಾಗಿರಬೇಕು ಎಂದು ಶೃಂಗೇರಿ ಶ್ರೀ ಶಾರದಾ ಪೀಠದ ಶಂಕರಾಚಾರ್ಯ ಜಗದ್ಗುರು ವಿಧುಶೇಖರಭಾರತಿ ಮಹಾಸ್ವಾಮೀಜಿ ಹೇಳಿದರು.

ಗ್ರಾಮದ ಶ್ರೀ ಚಿದಂಬರೇಶ್ವ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಳಿವಿನ ಅಂಚಿನಲ್ಲಿದ್ದ ಸನಾತನ ಧರ್ಮವನ್ನು ಅನೇಕ ಅಡ್ಡಿ ಆತಂಕಗಳ ನಡುವೆ ತಮ್ಮ ಪುಟ್ಟ ವಯಸ್ಸಿನಲ್ಲಿಯೇ ಪುನರ್ಜಿವನಗೊಳಿಸಿದ ಆದಿಗುರು ಶಂಕರಾಚಾರ್ಯರಿಗೆ ನಾವೆಲ್ಲ ಸದಾ ಋಣಿಗಳಾಗಿರಬೇಕು. ಅವರು ಮಾಡಿದ ಧರ್ಮಜಾಗೃತಿ ಕೆಲಸ ಇಂದು ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ. ಕಲಾದಗಿಯ ಪುಟ್ಟ ಊರಿನಲ್ಲಿ ಹಿಂದು ಧರ್ಮೀಯರಿಗೆ ಸಭಾಭವನ ಇಲ್ಲದಿರುವುದನ್ನು ಕಂಡು ಶ್ರೀ ಚಿದಂಬರೇಶ್ವರ ಸೇವಾ ಸಮಿತಿಯವರು ಸಭಾಭವನ ನಿರ್ಮಿಸಿರುವುದು ಅಭಿನಂದನೀಯ ಎಂದರು.

ಸಂಭ್ರಮದ ಸ್ವಾಗತ: ಅಂದು ಸಂಜೆ 5 ಗಂಟೆಗೆ ಬಾಗಲಕೋಟೆಯಿಂದ ಆಗಮಿಸಿದ ಜಗದ್ಗುರುಗಳನ್ನು ಸಭಾಭವನದ ಹೊರಭಾಗದಿಂದ ವೇದಘೋಷ ಹಾಗೂ ಕುಂಭಮೇಳದೊಂದಿಗೆ ಸ್ವಾಗತಿಸಿ ಸಭೆಗೆ ಬರಮಾಡಿಕೊಳ್ಳಲಾಯಿತು. ಚಿದಂಬರ ಸೇವಾ ಸಮಿತಿಯ ಅಧ್ಯಕ್ಷ ರಮೇಶ ಮಠ ಮುಂದಾಳತ್ವದಲ್ಲಿ ಜಗದ್ಗುರುಗಳಿಗೆ ಲಪುಷ್ಟ ಸಮರ್ಪಣೆ ಮಾಡಲಾಯಿತು.

ಯುವ ಚಿತ್ರಕಾರ ಸಂದೇಶ ಕುಲಕರ್ಣಿ ತಾನು ಚಿತ್ರಿಸಿದ ಶ್ರೀಗಳ ಭಾವಚಿತ್ರವನ್ನು ಸಮರ್ಪಿಸಿದರು. ಸಭೆಯಿಂದ ತೆರಳುವಾಗ ಸಭಾಭವನಕ್ಕೆ ಹೊಂದಿಕೊಂಡಂತಿರುವ ಗ್ರಾಮದೇವತೆಯ ಗುಡಿಗೆ ತೆರಳಿ ಪೂಜೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net