ದೇವತಾ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ

Nandagudi 1 rm K. Sathyvara
ಕೆ.ಸತ್ಯವಾರ ಗ್ರಾಮದಲ್ಲಿ ಶ್ರೀಲಕ್ಷ್ಮೀ ನಾರಾಯಣಸ್ವಾಮಿ 14ನೇ ಕಲ್ಯಾಣೋತ್ಸವ ನಡೆಯಿತು.
Published on

ವಿಜಯವಾಣಿ ಸುದ್ದಿಜಾಲ ನಂದಗುಡಿ
ಶ್ರದ್ಧೆ, ಭಕ್ತಿಯಿಂದ ದೇವರ ಪೂಜಿಸಿದರೆ ಸುಖ-ಶಾಂತಿ, ನೆಮ್ಮದಿಯಿಂದ ಜೀವಿಸಬಹುದು ಎಂದು ಕೆ.ಸತ್ಯವಾರ ಗ್ರಾಪಂ ಸದಸ್ಯ ಮಂಜುಳಾ ಎಸ್.ಪಿ.ರಾಜಣ್ಣ ತಿಳಿಸಿದರು.
ಹೊಸಕೋಟೆ ತಾಲೂಕು ಕೆ.ಸತ್ಯವಾರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶ್ರೀಲಕ್ಷ್ಮೀ ನಾರಾಯಣಸ್ವಾಮಿ 14ನೇ ಕಲ್ಯಾಣೋತ್ಸವದಲ್ಲಿ ಮಾತನಾಡಿದರು.
ದೇವರ ಕಾರ್ಯಗಳನ್ನು ಮಾಡುವುದರಿಂದ ಗ್ರಾಮಕ್ಕೆ ಒಳ್ಳೆಯದಾಗುತ್ತದೆ. ಪ್ರತಿ ಗ್ರಾಮದಲ್ಲೂ ದೇವಸ್ಥಾನ ಕಟ್ಟಿಸಿ, ಪೂಜೆ ಸಲ್ಲಿಸಿದಲ್ಲಿ ಗ್ರಾಮಕ್ಕೆ ದುಷ್ಟ ಶಕ್ತಿಗಳು ಬರದೆ, ಶಾಂತಿ, ನೆಮ್ಮದಿ ಲಭಿಸುತ್ತದೆ. ಜನರಲ್ಲಿ ಭಕ್ತಿ, ಭಾವನೆ, ಸಂಪ್ರದಾಯ, ಸಂಸ್ಕಾರದ ಬಗ್ಗೆ ಅರಿವು ಮೂಡಿಸುವಂತಹ ದೇವರ ಕಾರ್ಯಕ್ರಮಗಳು ನಡೆಯಬೇಕು. ಇಲ್ಲಿ ಬಂದಂತಹ ಎಲ್ಲ ಭಕ್ತಾದಿಗಳ ಕಷ್ಟಗಳನ್ನು ಪರಿಹರಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಅನಾದಿ ಕಾಲದಿಂದಲೂ ಗ್ರಾಮಗಳಲ್ಲಿ ದೇವರ ಕಾರ್ಯ ನಡೆಯುತ್ತಿದ್ದು, ಪ್ರೀತಿ, ವಿಶ್ವಾಸದ ಜತೆಗೆ ಸಂಬಂಧಗಳು ಬೆಸೆಯುತ್ತವೆ. ಮನುಷ್ಯನ ಜೀವನ ಸಕಾರತ್ಮವಾಗಿ ಇರಬೇಕಾದರೆ, ಪುಣ್ಯಕ್ಷೇತ್ರಗಳ ಕಡೆ ಹೋಗಿ, ದೇವರ ದರ್ಶನ ಪಡೆಯಿರಿ. ಮಕ್ಕಳು ಒಳ್ಳೆ ಗ್ರಂಥಗಳನ್ನು ಓದಿ, ಜ್ಞಾನ ವೃದ್ಧಸಿಕೊಳ್ಳಲು ಪ್ರೋತ್ಸಾಹಿಸಿ ಎಂದು ಹೇಳಿದರು.
ಮುಖಂಡರಾದ ಎಸ್.ಪಿ.ಕೃಷ್ಣಪ್ಪ, ಎಸ್‌ಎಫ್‌ಸಿಎಸ್ ನಿರ್ದೇಶಕ ದೊಡ್ಮನೆ ರಮೇಶ್, ಎಸ್‌ಟಿಎಂ ಮುನಿರಾಜ್, ಜಿ.ಎಂ.ಆಂಜಿನಪ್ಪ, ಲಕ್ಷ್ಮೀಶ್, ದೇವರಾಜ್, ನಂಜುಂಡೇಗೌಡ, ವಿಜಯಕುಮಾರ್, ರಘುನಾಥ್, ಶ್ರೀನಿವಾಸಚಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net