ಸುತ್ತೂರು ಜಾತ್ರೆ ಪ್ರಚಾರ ರಥಕ್ಕೆ ಸ್ವಾಗತ

21 yelandur 01
ಯಳಂದೂರು ತಾಲೂಕಿನ ಅಗರ ಗ್ರಾಮಕ್ಕೆ ಮಂಗಳವಾರ ಆಗಮಿಸಿದ ಸುತ್ತೂರು ಜಾತ್ರೆಯ ಪ್ರಚಾರ ರಥಕ್ಕೆ ವೀರಶೈವ- ಲಿಂಗಾಯತ ಮುಖಂಡರು ಸ್ವಾಗತ ಕೋರಿದರು.
Published on

ಯಳಂದೂರು: ಶ್ರೀ ಕ್ಷೇತ್ರ ಸುತ್ತೂರಿನಲ್ಲಿ ಜ.26ರಿಂದ ಜಾತ್ರೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಮಂಗಳವಾರ ತಾಲೂಕಿಗೆ ಆಗಮಿಸಿದ ಜಾತ್ರಾ ಪ್ರಚಾರ ರಥಕ್ಕೆ ಅಗರ ಗ್ರಾಮದ ಮಠದ ಬಳಿ ಸ್ವಾಗತ ಕೋರಲಾಯಿತು.

ವೀರಶೈವ-ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಜಿ.ಮಹದೇವಪ್ಪ ಮಾತನಾಡಿ, ಸುತ್ತೂರಿನಲ್ಲಿ ನಡೆಯುವ ಜಾತ್ರೆಯನ್ನು ಪ್ರಚಾರ ಮಾಡಲು ರಥ ಎಲ್ಲ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಸಂಚರಿಸಿ ಈಗ ಯಳಂದೂರು ತಾಲೂಕು ತಲುಪಿದೆ. ತಾಲೂಕಿನ ಅಗರ ಮಠದಿಂದ ಮದ್ದೂರು, ಬೂದಿತಿಟ್ಟು, ಮಲಾರಪಾಳ್ಯ, ಗೌಡಹಳ್ಳಿ, ಚಾಮಲಾಪುರ, ಗುಂಬಳ್ಳಿ ಸರ್ಕಲ್, ಬಳೆಪೇಟೆ, ಯಳಂದೂರು, ಕಂದಹಳ್ಳಿ, ದುಗ್ಗಹಟ್ಟಿ, ಮೆಳ್ಳಹಳ್ಳಿ, ಹೊನ್ನೂರು ಕೆಸ್ತೂರು, ಮಲ್ಲಿಗೆಹಳ್ಳಿ ಗ್ರಾಮದಲ್ಲಿ ಸಂಚರಿಸಿ ನಂತರ ಚಾಮರಾಜನಗರ ತಾಲೂಕು ತಲುಪಲಿದೆ ಎಂದರು.

ಜಾತ್ರೆಯಲ್ಲಿ ಅನೇಕ ಪ್ರದರ್ಶನಗಳು ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ತಾಲೂಕಿನಿಂದ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಶರಣ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ವಿ.ಮಲ್ಲಿಕಾರ್ಜುನಸ್ವಾಮಿ, ವೀರಶೈವ ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ಗೌಡಹಳ್ಳಿ ರವಿ, ರೋಟರಿ ತಾಲೂಕು ಅಧ್ಯಕ್ಷ ವೈ.ಎನ್.ಪ್ರಕಾಶ್, ವೀರಶೈವ ಮಹಾಸಭಾದ ತಾಲೂಕು ಕಾರ್ಯದರ್ಶಿ ಪ್ರಭುಸ್ವಾಮಿ, ಮುಖಂಡರಾದ ಬಸವಣ್ಣ, ನಿವೃತ್ತ ಶಿಕ್ಷಕ ಶಿವಕುಮಾರಸ್ವಾಮಿ, ಮನು, ರುದ್ರೇಶ್, ಶ್ರೀಕಂಠಮೂರ್ತಿ, ನಾಗಪ್ಪ, ಸುಬ್ಬಣ್ಣ, ರಾಜಪ್ಪ, ಮಂಜು, ಸಿದ್ದರಾಜು, ಭರತ್, ಪಂಚಾಕ್ಷರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net