ಸುತ್ತೂರು ಜಾತ್ರಾ ಪ್ರಚಾರ ರಥಕ್ಕೆ ಸ್ವಾಗತ

16 mlv 4.
ಮಳವಳ್ಳಿ ತಾಲೂಕಿನ ರಾಗಿಬೊಮ್ಮನಹಳ್ಳಿ ಗ್ರಾಮಕ್ಕೆ ಭಾನುವಾರ ಆಗಮಿಸಿದ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥಕ್ಕೆ ಗ್ರಾಮದ ಯಜಮಾನರು ಹಾಗೂ ಮುಖಂಡರು ಪೂಜೆ ಸಲ್ಲಿಸಿ ಸ್ವಾಗತಿಸಿದರು. ಹಂಗ್ರಾಪುರ ಮಠದ ಬಸವಲಿಂಗ ದೇಶಿಕೇಂದ್ರ ಸ್ವಾಮೀಜಿ, ಬಿ.ಕೆ.ಶಿವಪ್ರಸಾದ್, ವಿಶ್ವಾಸ್, ಪುಟ್ಟರಾಜು, ಮಹದೇಸ್ವಾಮಿ, ಪ್ರಭುಸ್ವಾಮಿ, ರಮೇಶ್, ಪರಶಿವ, ಮೋಹನ, ಮಂಜು, ಬಸವರಾಜು, ಮಹೇಶ್ ಇದ್ದರು.
Published on

ಮಳವಳ್ಳಿ: ಸುತ್ತೂರು ಶ್ರೀ ಕ್ಷೇತ್ರದಲ್ಲಿ 2025ರ ಜ.26 ರಿಂದ 31 ರವರೆಗೆ ನಡೆಯುವ ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮೂರು ದಿನಗಳ ಪ್ರಚಾರ ರಥ ಸಂಚರಿಸಿತು.

ಡಿ.14 ರಂದು ತಾಲೂಕಿನ ಚಿಕ್ಕಬಾಗಿಲು ಗ್ರಾಮಕ್ಕೆ ಆಗಮಿಸಿದ ಪ್ರಚಾರ ರಥಕ್ಕೆ ತಾಲೂಕು ವೀರಶೈವ ಮಹಾಸಭ ಹಾಗೂ ಗ್ರಾಮದ ಮುಖಂಡರಿಂದ ಪೂಜೆ ಸಲ್ಲಿಸಿ ಸ್ವಾಗತಿಸಲಾಯಿತು.

ನಂತಂರ ಪೂರಿಗಾಲಿ, ನೆಲ್ಲಿಗೆರೆ, ಅವ್ವೇರಹಳ್ಳಿ, ಕಿರುಗಾಲು, ಚಿಕ್ಕಮುಲಗೂಡು, ಸಂಶೆಟ್ಟಿಪುರ, ಕನ್ನಳ್ಳಿ ಹಾಗೂ ಮಳವಳ್ಳಿ ಪಟ್ಟಣದಲ್ಲಿ ಸಂಚರಿಸಿ ರಾಗಿಬೊಮ್ಮನಹಳ್ಳಿ ಗ್ರಾಮದಲ್ಲಿ ವಾಸ್ತವ್ಯ ಹೂಡಿತು. ಡಿ.15 ರಂದು ಕುಂದೂರು, ತೆಂಕಹಳ್ಳಿ, ನಾರಾಯಣಪುರ, ಮುಟ್ಟನಹಳ್ಳಿ, ಸರಗೂರು, ಬಿ.ಜಿ.ಪುರ, ಕಗ್ಗಲೀಪುರ, ಬೆಳಕವಾಡಿ, ಹೊಸಹಳ್ಳಿ, ಪಂಡಿತಹಳ್ಳಿ, ಬಾಚನಹಳ್ಳಿ, ಹೆಬ್ಬಣಿ, ಗೌಡಗೆರೆ ಮಾರ್ಗವಾಗಿ ಸಂಚರಿಸಿ ಡಿ.ಹಲಸಹಳ್ಳಿ ಗವಿಮಠದಲ್ಲಿ ವಾಸ್ತವ್ಯ ಹೂಡಿತು. ಡಿ.16 ಹಾಡ್ಲಿ, ನಂಜೇಗೌಡನದೊಡ್ಡಿ , ಹಲಗೂರಿನಲ್ಲಿ ಕನಕಪುರ ತಾಲೂಕಿಗೆ ರಥವನ್ನು ಬೀಳ್ಕೊಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net