

ಶಿರಸಿ: ಕಸ್ತೂರಿರಂಗನ್ ವರದಿ ಜಾರಿಯನ್ನು ಸಚಿವ ಸಂಪುಟವು ತಿರಸ್ಕರಿಸಲು ತೀರ್ಮಾನಿಸಿದ್ದು, ರಾಜ್ಯ ಸರ್ಕಾರದ ಜನಪರ ನಿಲುವಿಗೆ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಸ್ವಾಗತಿಸಿದ್ದಾರೆ.
ಕರಡು ವರದಿತಿರಸ್ಕರಿಸಲು ಸರ್ಕಾರದ ಮೇಲೆ ಒತ್ತಡ ತರಲಾಗಿತ್ತು. ವರದಿ ಅವೈಜ್ಞಾನಿಕ ಅಂಶಗಳ ಕುರಿತು ವ್ಯಾಪಕ ಟೀಕೆಗೆ ಕಾರಣವಾಗಿತ್ತು ಎಂದು ಈ ಸಂದಂರ್ಭದಲ್ಲಿ ಅವರು ಹೇಳಿದರು. ಕಳೆದ 11 ವರ್ಷಗಳ ಹಿಂದೆ ಮಂಡಿಸಲಾದ ಕರಡು ಕಸ್ತೂರಿರಂಗನ್ ವರದಿ ಕುರಿತು ಹೋರಾಟಗಾರರ ವೇದಿಕೆಯು ಹೋರಾಟ, ಜನಜಾಗೃತಿ ಹಾಗೂ ಒಂದು ಲಕ್ಷ ಕುಟುಂಬದಿಂದ ಕೇಂದ್ರ ಸರ್ಕಾರಕ್ಕೆ ಆಕ್ಷೇಪಣಾ ಪತ್ರ ಸಲ್ಲಿಸುವ ಅಭಿಯಾನ ಮುಂತಾದ ಹೋರಾಟ ಹಮ್ಮಿಕೊಂಡು ಒತ್ತಾಯಿಸಲಾಗಿತ್ತು ಎಂದು ರವೀಂದ್ರ ನಾಯ್ಕ ತಿಳಿಸಿದ್ದಾರೆ.