

ಶಿರಸಿ: ಲೋಕ ಸ್ವರಾಜ್ಯ ಪಾದಯಾತ್ರೆಯನ್ನು ಬನವಾಸಿ ಬ್ಲಾಕ್ ಕಾಂಗ್ರೆಸ್, ಉಂಚಳ್ಳಿ ಗ್ರಾಪಂ ಹಾಗೂ ಸಾರ್ವಜನಿಕರಿಂದ ಮಂಗಳವಾರ ತಾಲೂಕಿನ ಉಂಚಳ್ಳಿಯಲ್ಲಿ ಸ್ವಾಗತಿಸಲಾಯಿತು.
ಮಹಾತ್ಮಗಾಂಧಿ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಅಂಗವಾಗಿ ಕಿರಣ್ ಮೂಗಬಸವ ನೇತೃತ್ವದಲ್ಲಿ ಲೋಕ ಸ್ವರಾಜ್ಯ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಭೂದಾನ ಚಳವಳಿಯ ಹರಿಕಾರ ವಿನೋಬಾ ಭಾವೆ 1958ರಲ್ಲಿ ಕರ್ನಾಟಕದಲ್ಲಿ ಭೂದಾನ ಯಾತ್ರೆ ಕೈಗೊಂಡು 5017 ಎಕರೆ ಭೂದಾನಕ್ಕೆ ಪ್ರೇರಣೆ ನೀಡಿದ್ದರು. ಅವರು ಸಾಗಿದ ಮಾರ್ಗದಲ್ಲಿ ಯಾತ್ರೆ ಕೈಗೊಳ್ಳಲಾಗಿದೆ. ಜ. 30ರಂದು ಗಾಂಧೀಜಿ ಪುಣ್ಯ ತಿಥಿಯಂದು ಹುಬ್ಬಳ್ಳಿಯಲ್ಲಿ ಯಾತ್ರೆ ಮುಕ್ತಾಯಗೊಳ್ಳಲಿದೆ.
ಉಂಚಳ್ಳಿ ಶಾಲಾ ಮಕ್ಕಳಿಗೆ ಗಾಂಧಿ ಚರಕ ಹಾಗೂ ಖಾದಿ ಮಹತ್ವದ ಬಗ್ಗೆ ವಿದ್ಯಾರ್ಥಿಗಳಲ್ಲಿ ಪ್ರಾಯೋಗಿಕವಾಗಿ ನೂಲು ನೇಯ್ದು ತೋರಿಸಲಾಯಿತು. ಬನವಾಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಫ್. ನಾಯ್ಕ, ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಬಸವರಾಜ ದೊಡ್ಮನಿ, ಉಂಚಳ್ಳಿ ಪಂಚಾಯಿತಿ ಅಧ್ಯಕ್ಷ ಅಶ್ವಥ್ ನಾಯ್ಕ, ಸದಸ್ಯರಾದ ಎ.ಕೆ. ನಾಯ್ಕ, ಫಾಮಿದ್ ಬೇಗಂ, ರವಿತೇಜ ರೆಡ್ಡಿ, ಹುಲಿಯ ಗೌಡ್ರು, ಮಂಜಮ್ಮ ಬೋವಿ, ಅಲ್ತಾಫ್ ಸಲೀಂ ಸಾಬ್, ಅಸ್ಲಾಂ ಖಾನ್, ಕೊರ್ಲಕಟ್ಟಾ ಸೊಸೈಟಿ ಅಧ್ಯಕ್ಷ ಶಿವಾನಂದ ನಾಯ್ಕ ಇತರರಿದ್ದರು.