ಕರ್ನಾಟಕದ ಕಣ್ಮಣಿ ಕಿತ್ತೂರು ರಾಣಿ ಚನ್ನಮ್ಮ

UDP-6-4-Jyothi
ಉಡುಪಿಗೆ ಆಗಮಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ವಿಜಯ ಜ್ಯೋತಿ ಯಾತ್ರೆಗೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸ್ವಾಗತಿಸಿದರು. ಮಮತಾದೇವಿ ಜಿ.ಎಸ್., ರಾಯಪ್ಪ, ಪೂರ್ಣಿಮಾ, ಹಾಕಪ್ಪ ಲಮಾಣಿ, ನೀಲಾವರ ಸುರೇಂದ್ರ ಅಡಿಗ, ನರೇಂದ್ರ ಕುಮಾರ್ ಕೋಟ, ರವಿರಾಜ್ ಎಚ್.ಪಿ., ನರಸಿಂಹ ಮೂರ್ತಿ ಇತರರಿದ್ದರು.
Published on

ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಅಭಿಮತ

ವಿಜಯೋತ್ಸವ ಜ್ಯೋತಿಯಾತ್ರೆಗೆ ಸ್ವಾಗತ

ವಿಜಯವಾಣಿ ಸುದ್ದಿಜಾಲ ಉಡುಪಿ
ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ದಿಟ್ಟತನದಿಂದ ಹೋರಾಡಿದ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ. ಆಕೆಯ ಶೌರ್ಯ ಹಾಗೂ ಸಾಹಸ ಎಂದಿಗೂ ಮಾದರಿಯಾಗಿದೆ. ದಿಟ್ಟ ಹೋರಾಟದ ಮೂಲಕವೇ ಕಿತ್ತೂರ ರಾಣಿ ಚನ್ನಮ್ಮ ಕರ್ನಾಟಕದ ಕಣ್ಮಣಿಯಾಗಿದ್ದಾಳೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅಭಿಮತ ವ್ಯಕ್ತಪಡಿಸಿದರು.

ಉಡುಪಿಯ ಪವಾಸಿ ಮಂದಿರಕ್ಕೆ ಭಾನುವಾರ ಆಗಮಿಸಿದ್ದ ಚನ್ನಮ್ಮ ವಿಜಯೋತ್ಸವ ಜ್ಯೋತಿ ಯಾತ್ರೆಯನ್ನು ಸ್ವಾಗತಿಸಿ, ರಥದಲ್ಲಿದ್ದ ರಾಣಿ ಚನ್ನಮ್ಮ ಪುತ್ಥಳಿಗೆ ಹಾರ ಅರ್ಪಿಸಿ, ಜ್ಯೋತಿ ರಥಯಾತ್ರೆಗೆ ಶುಭ ಹಾರೈಸಿದರು.

UDP-6-4B-Jyothi
ಉಡುಪಿಗೆ ಆಗಮಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ವಿಜಯ ಜ್ಯೋತಿ ಯಾತ್ರೆಗೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸ್ವಾಗತಿಸಿದರು. ಮಮತಾದೇವಿ ಜಿ.ಎಸ್., ರಾಯಪ್ಪ, ಪೂರ್ಣಿಮಾ, ಹಾಕಪ್ಪ ಲಮಾಣಿ, ನೀಲಾವರ ಸುರೇಂದ್ರ ಅಡಿಗ, ನರೇಂದ್ರ ಕುಮಾರ್ ಕೋಟ, ರವಿರಾಜ್ ಎಚ್.ಪಿ., ನರಸಿಂಹ ಮೂರ್ತಿ ಇತರರಿದ್ದರು.

200 ವರ್ಷದ ಇತಿಹಾಸ

ವೀರ ವನಿತೆ ಕಿತ್ತೂರು ರಾಣಿ ಚನ್ನಮ್ಮ ಬ್ರಿಟಿಷರ ವಿರುದ್ಧ ವಿಜಯ ಸಾಧಿಸಿ 200 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ವಿಜಯೋತ್ಸವ ಹಮ್ಮಿಕೊಂಡಿದೆ. ತನ್ನಿಮಿತ್ತ ರಾಜ್ಯವ್ಯಾಪಿ ಕಿತ್ತೂರು ವಿಜಯೋತ್ಸವದ ವಿಜಯ ಜ್ಯೋತಿ ಯಾತ್ರೆ ಆಯೋಜಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್., ನಗರಸಭಾ ಆಯುಕ್ತ ರಾಯಪ್ಪ, ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ಹಾಕಪ್ಪ ಲಮಾಣಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಶೆಟ್ಟಿ, ನರೇಂದ್ರ ಕುಮಾರ್ ಕೋಟ, ಉಡುಪಿ ತಾಲೂಕು ಕಸಾಪ ಅಧ್ಯಕ್ಷ ರವಿರಾಜ್ ಎಚ್.ಪಿ., ಡಾ.ಉಮೇಶ್ ಪುತ್ರನ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳಾದ ನರಸಿಂಹ ಮೂರ್ತಿ, ದಿವಾಕರ ಶೆಟ್ಟಿ, ಭುವನಪ್ರಸಾದ್ ಹೆಗ್ಡೆ, ರಂಜಿನಿ, ಜಗನ್ನಾಥ ಪಣಸಾಲೆ, ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ವಿವಿಧ ಇಲಾಖೆಗಳ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಎಲ್ಲರನ್ನೂ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

UDP-6-4A-Jyothi
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಕಿತ್ತೂರು ರಾಣಿ ಚನ್ನಮ್ಮ ವಿಜಯೋತ್ಸವದ ಜ್ಯೋತಿಯಾತ್ರೆ ಸ್ವಾಗತಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net