ಕಾರ್ಗಿಲ್ ವಿಜಯ ರಥಯಾತ್ರೆಗೆ ಸ್ವಾಗತ

26KDR2 (2)
ಕಡೂರಿಗೆ ಆಗಮಿಸಿದ ಕಾರ್ಗಿಲ್ ವಿಜಯ ರಥಯಾತ್ರೆಯನ್ನು ಬಿಜೆಪಿ ಮುಖಂಡರು ಸ್ವಾಗತಿಸಿದರು. ಮಂಡಲಾಧ್ಯಕ್ಷ ಬಿ.ಪಿದೇವಾನಂದ್, ಅಜೇಯ್‌ಒಡೆಯರ್, ಜಿಗಣೇಹಳ್ಳಿ ನೀಲಕಂಠಪ್ಪ, ದಾನಿ ಉಮೇಶ್ ಇದ್ದರು.
Published on

ಕಡೂರು: ಕಾರ್ಗಿಲ್ ಯುದ್ದ ಭಾರತ ಹಾಗೂ ನಮ್ಮ ಸೈನ್ಯದ ಪಾಲಿಗೆ ಮಹತ್ವವಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಂದ್ರ ಬೆಳವಾಡಿ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಬಿಜೆಪಿ ಯುವಮೋರ್ಚಾ ಏರ್ಪಡಿಸಿದ್ದ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಬೈಕ್ ರ‌್ಯಾಲಿ ಪ್ರಯುಕ್ತ ತರೀಕೆರೆಯಿಂದ ಆಗಮಿಸಿದ ಕಾರ್ಗಿಲ್ ವಿಜಯಜ್ಯೋತಿ ರಥಯಾತ್ರೆಯನ್ನು ಬಿಜೆಪಿ ಕಾರ್ಯಕರ್ತರು ಸ್ವಾಗತಿಸಿ ಮಾತನಾಡಿದರು.
ಭಾರತ ವೀರರು ತ್ಯಾಗ ಬಲಿದಾನದ ಲವಾಗಿ ಕಾರ್ಗಿಲ್ ಯುದ್ದದಲ್ಲಿ ವಿಜಯದ ಪತಾಕೆ ಹಾರಿಸಿದ ನೆನಪು 25 ವರ್ಷಗಳು ಪೂರೈಸಿರುವುದು ಭಾರತದ ಪಾಲಿಗೆ ಹೆಮ್ಮೆಯ ದಿನವಾಗಿದೆ. ಯುದ್ದದಲ್ಲಿ ಭಾರತೀಯ ಸೈನಿಕರು ಕೆಚ್ಚೆದೆಯಿಂದ ಹೋರಾಡಿ ತನ್ನ ದೇಶದ ಘನತೆ ಸಾಹಸವನ್ನು ಎತ್ತಿ ಹಿಡಿದಿದ್ದರು. ಇವರ ತ್ಯಾಗ ಬಲಿದಾನ ದೇಶಪ್ರೇಮಾ ಪ್ರತಿಯೊಬ್ಬ ಭಾರತೀಯರಿಗೆ ಸ್ಪೂರ್ತಿಯಾಗಿದೆ ಎಂದರು.
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅಜೇಯ್ ಒಡೆಯರ್ ನೇತೃತ್ವದಲ್ಲಿ ಕೆಎಲ್‌ವಿ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ತಿರಂಗ ಧ್ವಜ ಹಿಡಿದು ಬೈಕ್ ರ‌್ಯಾಲಿ ನಡೆಸಲಾಯಿತು. ನಿವೃತ್ತ ಸೈನಿಕರ ಸಂಘದ ಸದಸ್ಯರು ಮೆರವಣಿಗೆಯಲ್ಲಿ ಸಾಥ್ ನೀಡಿದರು. ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ಮಂಡಲಾಧ್ಯಕ್ಷ ಬಿ.ಪಿ.ದೇವಾನಂದ್, ಉಪಾಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ, ಕೋಶಾಧ್ಯಕ್ಷ ದಾನಿ ಉಮೇಶ್, ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಶೇಖರಪ್ಪ, ಪುರಸಭಾ ಸದಸ್ಯರಾದ ಯತೀರಾಜ್, ಗೋವಿಂದು, ಸುಧಾ ಉಮೇಶ್ ಮುಖಂಡರಾದ ರಾಜಾನಾಯ್ಕ, ಚೌಳಹಿರಿಯೂರು ರವಿ, ಕೆ.ಆರ್.ಚಂದ್ರು, ಟಿ,.ಆರ್. ಲಕ್ಕಪ್ಪ, ಚಿನ್ನರಾಜು, ವೆಂಕಟೇಶ್, ಮತಿಘಟ್ಟ ನವೀನ್, ಭರತ್‌ಕೆಂಪರಾಜ್, ನಾಗೇಂದ್ರ ಅಗ್ನಿ, ಕುಮಾರ ಪಾಟೀಲ, ಯುವ ಮೋರ್ಚಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net