ಕನ್ನಡ ಜ್ಯೋತಿ ರಥಕ್ಕೆ ಉಪ್ಪಿನಂಗಡಿಯಲ್ಲಿ ಸ್ವಾಗತ

ratha
Published on

ಉಪ್ಪಿನಂಗಡಿ: ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಅಭಿಯಾನದ ಅಂಗವಾಗಿ ರಾಜ್ಯಾದ್ಯಂತ ಸಂಚರಿಸಲಿರುವ ಕನ್ನಡ ಜ್ಯೋತಿ ರಥಯಾತ್ರೆ ಸೋಮವಾರ ಬೆಳಗ್ಗೆ ಉಪ್ಪಿನಂಗಡಿಗೆ ಆಗಮಿಸಿದ್ದು, ಪುತ್ತೂರು ತಾಲೂಕು ಮತ್ತು ಕಡಬ ತಾಲೂಕು ಆಡಳಿತ ವತಿಯಿಂದ ಉಪ್ಪಿನಂಗಡಿಯಲ್ಲಿ ಸ್ವಾಗತಿಸಿ, ಕಡಬ ತಾಲೂಕಿಗೆ ಬೀಳ್ಕೊಡಲಾಯಿತು.

2023 ನವೆಂಬರ್ 1ರಂದು ಹಂಪಿಯಿಂದ ಹೊರಟ ಕನ್ನಡ ಜ್ಯೋತಿ ರಥ ಚಿಕ್ಕಮಗಳೂರು ಜಿಲ್ಲೆಯಿಂದ ಮೂಡಿಗೆರೆ ಮೂಲಕ ಬಂದು ಸೆ.29ರಂದು ಬೆಳ್ತಂಗಡಿ ತಾಲೂಕು ಪ್ರವೇಶಿಸಿದ್ದು, 30ರಂದು ಬೆಳಗ್ಗೆ ಬೆಳ್ತಂಗಡಿ ಗಡಿ ಗ್ರಾಮ ಇಳಂತಿಲದಲ್ಲಿ ರಥವನ್ನು ಬರಮಾಡಿಕೊಂಡು ರಥದಲ್ಲಿದ್ದ ಕನ್ನಡ ತಾಯಿ ಭುವನೇಶ್ವರಿ ಮೂರ್ತಿಗೆ ಕಡಬ ತಹಸೀಲ್ದಾರ್ ಪ್ರಭಾಕರ ಕಜೂರೆ ಮತ್ತು ಪುತ್ತೂರು ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಹೂವಿನ ಹಾರ ಹಾಕಿ ಸ್ವಾಗತಿಸಿದರು.

ಬೆಳ್ತಂಗಡಿ ತಹಸೀಲ್ದಾರ್ ಪಾವಾಡಪ್ಪ ದೊಡ್ಡಮನೆ, ಉಪ್ಪಿನಂಗಡಿ ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರಾಡ್ರಿಗಸ್, ಇಳಂತಿಲ ಗ್ರಾಪಂ ಸದಸ್ಯ ಯೂಸುಫ್ ಪೆದಮಲೆ, ಮಾಜಿ ಸದಸ್ಯ ಫಯಾಝ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net