ನಗರಕ್ಕಾಗಮಿಸಿದ ಜೈನ ಧರ್ಮಗುರುಗಳಿಗೆ ಸ್ವಾಗತ

15 ckm 4
ಚಿಕ್ಕಮಗಳೂರಿಗೆ ಆಗಮಿಸಿದ ಜೈನ ಗುರುಗಳಾದ ಮೋಹಜಿತ್ ಕುಮಾರ್‌ಜಿ, ಮುನಿಶ್ರೀ ಭವ್ಯಕುಮಾರ್‌ಜಿ, ಮುನಿಶ್ರೀ ಜಹೇಶ್‌ಕುಮಾರ್ ಅವರನ್ನು ಶಾಸಕ ಎಚ್.ಡಿ.ತಮ್ಮಯ್ಯ ಸ್ವಾಗತಿಸಿದರು. ಮಹೇಂದ್ರ ಕುಮಾರ್ ಡೋಸಿ, ತಾರಾಚಂದ್, ಅಶೋಕ್ ಕುಮಾರ್ ಜೈನ್, ಗೌತಮ್ ಚಂದ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ವರ್ಷ ಬರಗಾಲದಿಂದ ತತ್ತರಿಸಿದ್ದು, ಇಂದು ತೇರಾಪಂಥ್ ಜೈನ ಧರ್ಮಗುರುಗಳ ಪಾದ ಸ್ಪಶÀðದಿಂದ ಈ ವರ್ಷ ಉತ್ತಮ ಮಳೆಯಾಗುತ್ತಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.

ತೇರಾಪಂಥ್ ಸಂಘದಿAದ ನಗರಕ್ಕಾಗಮಿಸಿದ ತೇರಾಪಂಥ್ ಧರ್ಮ ಗುರುಗಳಾದ ಮೋಹಜಿತ್ ಕುಮಾರ್‌ಜಿ, ಮುನಿಶ್ರೀ ಭವ್ಯಕುಮಾರ್‌ಜಿ, ಮುನಿಶ್ರೀ ಜಹೇಶ್‌ಕುಮಾರ್ ಜೈನ ಧರ್ಮಗುರುಗಳನ್ನು ಸ್ವಾಗತಿಸಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಸಂದರ್ಭದಲ್ಲಿ ಧರ್ಮ ಗುರುಗಳನ್ನು ಸ್ವಾಗತಿಸಿ ಮಾತನಾಡಿದರು.
ಇಂದು ಚಿಕ್ಕಮಗಳೂರಿನಲ್ಲಿ ಚಾತುರ್ಮಾಸ ಪೂಜೆಯನ್ನು ಮುಂದಿನ ಸುಮಾರು ೪ ತಿಂಗಳುಗಳ ಕಾಲ ಇಲ್ಲಿನ ತೇರಾಪಂಥ್ ಭವನದಲ್ಲಿ ನಡೆಸಲಾಗುತ್ತಿದೆ. ಗುರೂಜಿಗಳು ಜಿಲ್ಲೆಯಾದ್ಯಂತ ಉತ್ತಮ ಮಳೆ, ಬೆಳೆ ಆಗುವಂತೆ ಆಶೀರ್ವಾದ ಮಾಡಲಿ ಎಂದು ಹರಸಿ ಹಾರೈಸಲು ಮನವಿ ಮಾಡಿದರು.
ಪಾದಯಾತ್ರೆ ಮೂಲಕ ದೇಶಾದ್ಯಂತ ಸಂಚರಿಸುತ್ತಿರುವ ಜೈನ ಮುನಿಗಳು ಸರ್ವ ಜನರ ಒಳಿತಿಗಾಗಿ ಶಾಂತಿಯಿAದ ಅಹಿಂಸಾ ಧರ್ಮವನ್ನು ಪ್ರತಿಪಾದಿಸುತ್ತ ಎಲ್ಲರೂ ಶಾಂತಿ ಪ್ರಿಯರಾಗಬೇಕೆಂದು ದೇವರಲ್ಲಿ ಪ್ರಾರ್ಥಿಸುತ್ತಾರೆ ಎಂದರು.
ತೇರಾಪAಥ್ ಸಭಾ ಅಧ್ಯಕ್ಷ ಮಹೇಂದ್ರ ಕುಮಾರ್ ಡೋಸಿ ಮಾತನಾಡಿ, ತೇರಾಪಂಥ್ ಮಹಾ ಸಂಘದ ಆಚಾರ್ಯರುಗಳು ಇಂದು ಜಾತುರ್ಮಾಸದ ಅಂಗವಾಗಿ ತೇರಾಪಂಥ್ ಭವನ ಪ್ರವೇಶಿಸಿ ಮುಂದಿನ ೪ ತಿಂಗಳವರೆಗೆ ಚಾತುರ್ಮಾಸವನ್ನು ಆಚರಿಸಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೈನ ಧರ್ಮಗುರುಗಳು ತೇರಾಪಂಥ್ ಧರ್ಮ ಸಂಘದ ಧರ್ಮವನ್ನು ಪ್ರಬೋಧಿಸುತ್ತಾರೆ. ಪ್ರತೀ ದಿನ ಬೆಳಗ್ಗೆ ೯.೩೦ ರಿಂದ ೧೦.೩೦ ರವರೆಗೆ ಧರ್ಮ ಸಭೆ ನಡೆಯಲಿದ್ದು, ನಗರದ ಎಲ್ಲ ಧರ್ಮದವರು ಭಾಗವಹಿಸುವ ಮೂಲಕ ಗುರೂಜಿಗಳ ಆಶೀರ್ವಾದ ಪಡೆಯಬೇಕು ಎಂದು ಮನವಿ ಮಾಡಿದರು.
ತೇರಾಪಂಥ್ ಸಭಾ ನಿಕಟ ಪೂರ್ವ ಅಧ್ಯಕ್ಷ ತಾರಾಚಂದ್, ಜೈನ್ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಮಹಿಳಾ ಮಂಡಳಿ ಅಧ್ಯಕ್ಷೆ ಗುಣವಂತಿ ಸೇರಿ ಒಗ್ಗಟ್ಟಿನಿಂದ ಈ ಕಾರ್ಯಕ್ರಮ ಮಾಡುತ್ತಿರುವ ಉz್ದೆÃಶ ಸರ್ವ ಜನರ ಒಳಿತಿಗಾಗಿ ಎಂದು ಶ್ಲಾಘಿಸಿದರು.
ಸಂಘದ ಕಾರ್ಯದರ್ಶಿ ಪದಮ್ ಚಂದ್, ಮಾಜಿ ಅಧ್ಯಕ್ಷರಾದ ತಾರಾಚಂದ್, ತೇರಾಪಂಥ್ ಟ್ರಸ್ಟ್ ಅಧ್ಯಕ್ಷ ಅಶೋಕ್ ಕುಮಾರ್ ಜೈನ್, ಉಪಾಧ್ಯಕ್ಷರಾದ ಗೌತಮ್ ಚಂದ್, ನಗರಸಭೆ ಸದಸ್ಯ ವಿಫುಲ್ ಕುಮಾರ್ ಜೈನ್, ತೇರಾಪಂಥ್ ಯುವಕ್ ಪರಿಷತ್ ಅಧ್ಯಕ್ಷ ಜಯಿಶ್ ಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net