ಬಳ್ಳಾರಿ : ಇಲ್ಲಿನ ಜಿಲ್ಲಾಸ್ಪತ್ರೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡುವ ವೇಳೆ ಬಿಜೆಪಿ ಕಾರ್ಯಕರ್ತರು ಆಸ್ಪತ್ರೆಯ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ದಿಕ್ಕಾರ ಎಂಬ ಕೂಗಿನಿಂದ ಸ್ವಾಗತ ಮಾಡಿಕೊಂಡರು. ದಿನೇಶ್ ಗುಂಡೂರಾವ್ ಮೊದಲು ಆಸ್ಪತ್ರೆಗೆ ಭೇಟಿ ನೀಡುವ ಮೊದಲೇ ಬಿಜೆಪಿಯ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ, ಜಿಲ್ಲಾಸ್ಪತ್ರೆ ಆವರಣದಲ್ಲಿ ಆರೋಗ್ಯ ಸಚಿವರ ಭೇಟಿ ನೀಡುತ್ತಾರೆ ಎಂಬ ವಿಷಯ ತಿಳಿದ ಜಿಲ್ಲಾ ಆರೋಗ್ಯ ಇಲಾಖೆ ಹಸಿರು ಸ್ವಚ್ಛತೆ ಎಂಬಂತೆ ಕಾಣಿಸಲು ಹೂ ಪಾಟ್ ಇಡಲು ಮುಂದಾಗಿದ್ದರು. ಮಾಧ್ಯಮದಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆ. ಎಚ್ಚೇತ್ತುಕೊಂಡ ಆರೋಗ್ಯ ಇಲಾಖೆ ಸಚಿವರು ಬರುವುದು ಸಂಭ್ರಮಕ್ಕೆ ಅಲ್ಲ, ಸಂತಾಪಕ್ಕೆ ಎಂಬುದು ತಿಳಿದು ಹೂ ಪಾಟ್ ಗಳನ್ನು ತೆರವುಗೊಳಿಸಿದರು.