ಬನ್ನೂರಿನಲ್ಲಿ ಸಂವಿಧಾನ ಜಾಗೃತಿ ರಥಕ್ಕೆ ಸ್ವಾಗತ

20 bannur 2
ಬನ್ನೂರಿಗೆ ಮಂಗಳವಾರ ಆಗಮಿಸಿದ ಸಂವಿಧಾನ ಜಾಗೃತಿ ರಥವನ್ನು ಗಣ್ಯರು ಬರಮಾಡಿಕೊಂಡರು. ಎಸ್.ಕೃಷ್ಣಪ್ಪ, ಡಾ.ಬಿ.ಕೆ. ಜ್ಞಾನಪ್ರಕಾಶ್, ಮುನಾವರ್ ಪಾಷ, ರಾಮಲಿಂಗೇಗೌಡ, ಲೋಕಾಂಬಿಕಾ, ಜಾಕೀರ್ ಹುಸೇನ್, ಉಮೇಶ್, ಹೇಮಂತರಾಜ್, ಭೀಮರಾವ್ ವಡ್ಡರ್, ಪುಷ್ಪವತಿ, ಶಿವಮೂರ್ತಿ, ಶಿವಣ್ಣ, ಶಿವು ಇತರರಿದ್ದರು.
Published on

ಬನ್ನೂರು: ಪಟ್ಟಣದ ಕಾವೇರಿ ವೃತ್ತಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ರಥವನ್ನು ಮಂಗಳವಾರ ಅದ್ದೂರಿಯಾಗಿ ನಾಗರಿಕರು, ಗಣ್ಯರು ಬರಮಾಡಿಕೊಂಡರು.

ಪಟ್ಟಣದ ಎಂಎಂ ರಸ್ತೆಯ ಹಾದಿಯಲ್ಲಿ ಅದ್ದೂರಿಯಾಗಿ ನಗಾರಿ, ಬ್ಯಾಂಡ್, ಡೊಳ್ಳು ಕುಣಿತ, ಕಳಸ ಹೊತ್ತ ಮಹಿಳೆಯರು ಮತ್ತು ಶಾಲಾ ಮಕ್ಕಳು ಸ್ವಾಗತಿಸಿದರು. ನಂತರ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮತ್ತು ಪುಷ್ಪಾರ್ಚನೆ ಮಾಡಿ ಗೌರವ ವಂದನೆ ಸಲ್ಲಿಸಲಾಯಿತು.

ಮಾಜಿ ಶಾಸಕ ಎಸ್.ಕೃಷ್ಣಪ್ಪ ಮಾತನಾಡಿ, ಸಂವಿಧಾನ ಅಂಗೀಕರಿಸಿ 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಂಡಿದೆ. ಇದರ ಪ್ರಮುಖ ಉದ್ದೇಶ ನಮ್ಮಲ್ಲಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ ಎಂದರು.

ಪುರಸಭಾ ಮಾಜಿ ಸದಸ್ಯ ಡಾ.ಬಿ.ಕೆ. ಜ್ಞಾನಪ್ರಕಾಶ್ ಮಾತನಾಡಿ, ಜಗತ್ತಿನಲ್ಲಿ ಶ್ರೇಷ್ಠವಾದ ಸಂವಿಧಾನ ಭಾರತದ್ದಾಗಿದ್ದು, ಎಲ್ಲ ವರ್ಗದ ಜನರಿಗೂ ಸಂವಿಧಾನ ಸಮಾನತೆ ಅವಕಾಶ ನೀಡಿದೆ ಎಂದು ತಿಳಿಸಿದರು.

ನಂತರ ಎಲ್ಲರೂ ಸಂವಿಧಾನ ಪೀಠಿಕೆ ಓದುವ ಮೂಲಕ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಪುರಸಭಾ ಸದಸ್ಯ ಶಿವಣ್ಣ, ಶಿವು, ಮುಖಂಡರಾದ ಮುನಾವರ್ ಪಾಷ, ರಾಮಲಿಂಗೇಗೌಡ, ಲೋಕಾಂಬಿಕಾ, ಜಾಕೀರ್ ಹುಸೇನ್, ಉಮೇಶ್, ಪುರಸಭೆ ಮುಖ್ಯಾಧಿಕಾರಿ ಹೇಮಂತರಾಜ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಭೀಮರಾವ್ ವಡ್ಡರ್, ಪುಷ್ಪಾವತಿ, ಶಿವಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net