ಸಂಭಾಜಿ ಮಹಾರಾಜರ ಬಲಿದಾನ ಜ್ಯೋತಿಗೆ ಸ್ವಾಗತ

28 hly 2
Published on

 ಹಳಿಯಾಳ: ಧರ್ಮರಕ್ಷಕ ಶ್ರೀ ಛತ್ರಪತಿ ಸಂಭಾಜಿ ಮಹಾರಾಜರ ಬಲಿದಾನ ಮಾಸದ ಅಂಗವಾಗಿ ಮಹಾರಾಷ್ಟ್ರದ ಸಾತಾರಾ ಜಿಲ್ಲೆಯಿಂದ ಬೆಳಗಾವಿ ಮಾರ್ಗವಾಗಿ ಶುಕ್ರವಾರ ಅಳ್ನಾವರ ಮೂಲಕ ಹಳಿಯಾಳ ಪಟ್ಟಣಕ್ಕೆ ಆಗಮಿಸಿದ ಬಲಿದಾನ ಜ್ಯೋತಿ ಹಾಗೂ ಮೌನ ಮೆರವಣಿಗೆಗೆ ಇಲ್ಲಿಯ ಶಿವಾಜಿ ವೃತ್ತದಲ್ಲಿ ಮಾಜಿ ಶಾಸಕ ಸುನೀಲ ಹೆಗಡೆ ಬರಮಾಡಿಕೊಂಡರು.

ಛತ್ರಪತಿ ಶಿವಾಜಿ ಮಹಾರಾಜ ವೃತ್ತದಲ್ಲಿರುವ ಅಶ್ವಾರೂಢ ಶಿವಾಜಿ ಮಹಾರಾಜರ ಪುತ್ಥಳಿಗೆ ಸುನೀಲ ಹೆಗಡೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಚೂಡಪ್ಪಾ ಬೊಬಾಟಿ, ಪೂಜಾ ಧೂಳಿ, ನಾಗೇಂದ್ರ ಜಿವೋಜಿ, ಶಿವಾಜಿ ನರಸಾನಿ, ಸಂಜಯ ಹಿರೇಕರ, ಸಂಜು ಕೊಳುರ ಇತರರಿದ್ದರು. ಬಳಿಕ ಬಲಿದಾನ ಜ್ಯೋತಿಯು ಮುರ್ಕವಾಡ ಮತ್ತು ಯಡೋಗಾ ಗ್ರಾಮಕ್ಕೆ ತೆರಳಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net