ಶ್ರೀಸಿದ್ಧಾರೂಢ ಜ್ಯೋತಿ ಯಾತ್ರೆಗೆ ಸ್ವಾಗತ

14 TKE 2(SIDDARUDA)
Published on

ತರೀಕೆರೆ: ಪಟ್ಟಣಕ್ಕೆ ಆಗಮಿಸಿದ ಶ್ರೀ ಸಿದ್ಧಾರೂಢ ಜ್ಯೋತಿ ಯಾತ್ರೆಯನ್ನು ವಿವಿಧ ಸಮುದಾಯದ ಪ್ರಮುಖರು ಮಹಾತ್ಮ ಗಾಂಧಿ ವೃತ್ತದ ಬಳಿ ಶ್ರದ್ಧಾ ಭಕ್ತಿಯಿಂದ ಬರ ಮಾಡಿಕೊಂಡರು.

ಹುಬ್ಬಳ್ಳಿ ಶ್ರೀಸಿದ್ಧರೂಡ ಸ್ವಾಮಿ ಮಠದ ಶ್ರೀ ನಿತ್ಯಾನಂದ ಸ್ವಾಮೀಜಿ ಮಾತನಾಡಿ, ಶ್ರೀ ಸಿದ್ಧಾರೂಡ ಸ್ವಾಮಿಗಳ 190ನೇ ಹಾಗೂ ಶ್ರೀಗುರುನಾಥ ರೂಢ ಸ್ವಾಮೀಜಿ ಅವರ 115ನೇ ಜಯಂತ್ಯೋತ್ಸವ ಮತ್ತು ವಿಶ್ವ ಶಾಂತಿ ಅಂಗವಾಗಿ ಶ್ರೀ ಸಿದ್ಧಾರೂಡ ಸ್ವಾಮಿ ಅವರ ಕಥಾಮೃತ ಮೆರವಣಿಗೆ ಜತೆಗೆ ಆರೋಡ ಜ್ಯೋತಿಯಾತ್ರೆ ರಾಜ್ಯಾದ್ಯಂತ ಪ್ರವಾಸ ಹೊರಟಿದೆ ಎಂದು ತಿಳಿಸಿದರು.

ಆರೋಡ ಜ್ಯೋತಿ ಯಾತ್ರೆ ರಾಜ್ಯದ ನಾನಾ ಭಾಗದ ಜತೆಗೆ ಮಹಾರಾಷ್ಟ್ರ, ಆಂಧ್ರ, ಗೋವಾ ಪ್ರಮುಖ ಸ್ಥಳಗಳಲ್ಲಿ ಸಂಚರಿಸಲಿದೆ. ಹುಬ್ಬಳ್ಳಿ ಮಠದಲ್ಲಿ ೆ.20 ರಿಂದ 26ರವರೆಗೆ ವಿಶ್ವ ಶಾಂತಿ ಜತೆ ಸಮೃದ್ಧ ಭಾರತ ನಿರ್ಮಾಣದ ಸಲುವಾಗಿ ವಿವಿಧ ಪೂಜಾ ಕಾರ್ಯಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಸಿದ್ಧರೂಡ ಭಕ್ತ ಮಂಡಳಿ ಸದಸ್ಯರಾದ ಲಕ್ಕಪ್ಪರ ಮಂಜುನಾಥ, ಉಪ ವೀರ ಸಮಾಜದ ಭೈರಪ್ಪ, ದೇವಾಂಗ ಸಮುದಾಯದ ಕೃಷ್ಣಪ್ಪ, ವಾಲ್ಮೀಕಿ ಸಮುದಾಯದ ಪರಶುರಾಮ್, ಪ್ರಮುಖರಾದ ಎಂ.ನರೇಂದ್ರ, ಟಿ.ಎಸ್. ಪ್ರಕಾಶ್ ವರ್ಮ, ಟಿ.ಎನ್.ಜಗದೀಶ್, ಟಿ.ಜಿ.ಮಂಜುನಾಥ್, ರವಿ, ದರ್ಶನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net