

ಗಜೇಂದ್ರಗಡ: ಪಟ್ಟಣಕ್ಕೆ ಬುಧವಾರ ಸಂಜೆ ಆಗಮಿಸಿದ ಶೌರ್ಯ ಜಾಗರಣ ರಥಯಾತ್ರೆಗೆ ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗದಳ ಕಾರ್ಯಕರ್ತರು ಸ್ವಾಗತ ಕೋರಿದರು.
ಎಪಿಎಂಸಿ ಗಣೇಶ ದೇವಸ್ಥಾನದಿಂದ ಪ್ರಾರಂಭವಾದ ರಥಯಾತ್ರೆ ಕಾಲಕಾಲೆಶ್ವರ ವೃತ್ತ, ದುರ್ಗಾ ವೃತ್ತ, ಹಿರೇಬಜಾರ, ಕಟ್ಟಿ ಬಸವೇಶ್ವರ ರಂಗಮಂದಿರ, ಭಜರಂಗದಳ ವೃತ್ತ, ಬಸವೇಶ್ವರ ವೃತ್ತದ ಮೂಲಕ ಗದಗ ರಸ್ತೆಗೆ ತೆರಳಿ ಬೀಳ್ಕೊಡಲಾಯಿತು.
ಸಂಜೀವ ಜೋಶಿ, ಶ್ಯಾಮಣ್ಣ ವನ್ನಾಲ, ಮಂಜುನಾಥ ಅಜಮೀರ, ಪರಶುರಾಮ ವದೇಗೋಲ, ಅನುರಾಗ ಚಿನಿವಾಲರ, ಉಮೇಶ ಚನ್ನು ಪಾಟೀಲ, ವಿನಾಯಕ ಜಾಧವ, ವಿಶಾಲ ಇಟಗಿ, ಗಣೇಶ ದಿವಾನದ, ಓಂಪ್ರಕಾಶ ಅಯ್ಯನಗೌಡ್ರ ಇತರರು ಇದ್ದರು.