

ಧಾರವಾಡ: ನಗರದ ಕೆಲಗೇರಿ ಗ್ರಾಮಕ್ಕೆ ಬುಧವಾರ ಆಗಮಿಸಿದ `ಶೌರ್ಯ ಜಾಗರಣ ರಥಯಾತ್ರೆ'ಯನ್ನು ಗ್ರಾಮಸ್ಥರು, ಮಹಿಳೆಯರು ಪೂರ್ಣಕುಂಭದೊ೦ದಿಗೆ ಸ್ವಾಗತಿಸಿದರು.
ಈ ವೇಳೆ ಆರ್‌ಎಸ್‌ಎಸ್ ಉತ್ತರ ಕರ್ನಾಟಕ ಕಾರ್ಯಕಾರಿಣಿ ಸದಸ್ಯ ಶ್ರೀಧರ ನಾಡಿಗೇರ ಮಾತನಾಡಿ, ಸನಾತನ ಧರ್ಮ ಅಮರ. ಭಾರತ ಜಗದ್ಗುರು ಆಗಬೇಕಾದರೆ ಹಿಂದುಗಳು ಜಾಗೃತರಾಗಬೇಕು ಮತ್ತು ಒಂದಾಗಬೇಕು ಎಂದರು.
ಡಾ. ಎಸ್.ಆರ್. ರಾಮನಗೌಡರ, ಶಿವಾನಂದ ಸತ್ತಿಗೇರಿ, ಶಶಿ ಹಿರೇಮಠ, ಈರೇಶ ಅಂಚಟಗೇರಿ, ವಿಜಯÁನಂದ ಶೆಟ್ಟಿ, ಬಸವರಾಜ ಗರಗ, ಪ್ರಮೋದ ಕಾರಕೂನ, ರುದ್ರಗೌಡರ, ಚಂದ್ರಕಲಾ ಕೊಟಬಾಗಿ, ರೇಣುಕಾ ಇರಕಲ್, ಅಮಿತ್ ಪಾಟೀಲ, ಇತರರಿದ್ದರು.