ಶೌರ್ಯ ಜಾಗರಣ ರಥಯಾತ್ರೆಗೆ ಸ್ವಾಗತ

3 KLG 1 RATHA
Published on

ಕಲಘಟಗಿ: ಪಟ್ಟಣಕ್ಕೆ ಮಂಗಳವಾರ ಆಗಮಿಸಿದ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದ ಶೌರ್ಯ ಜಾಗರಣ ರಥಯಾತ್ರೆಗೆ ಹಿಂದು, ಬಿಜೆಪಿ ಕಾರ್ಯಕರ್ತರು ಸ್ವಾಗತ ಕೋರಿದರು.

ಹಿಂದು ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು ಜೈ ಶ್ರೀರಾಮ, ಜೈ ಹನುಮಾನ ಎಂದು ಘೊಷಣೆ ಕೂಗಿದರು. ನಂತರ ಬೆಂಡಿಗೇರಿ ಓಣಿ, ಅಕ್ಕಿ ಓಣಿ, ಬಮ್ಮಿಗಟ್ಟಿ ಕ್ರಾಸ್, ಅಳ್ನಾವರ ವೃತ್ತದಲ್ಲಿ ಸಮಾವೇಶಗೊಂಡು ಶೋಭಾಯಾತ್ರೆ ಅಂತ್ಯಗೊಂಡಿತು.

ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ, ಬಿಜೆಪಿ ತಾಲೂಕಾಧ್ಯಕ್ಷ ಬಸವರಾಜ ಶೆರೇವಾಡ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಗುಂಡಗೋವಿ, ಮುಖಂಡರಾದ ನಿಂಗಪ್ಪ ಸುತಗಟ್ಟಿ, ಶಿವಾನಂದ ಸತ್ತಿಗೇರಿ, ಸೋಮು ಕೊಪ್ಪದ, ಸದಾನಂದ ಚಿಂತಾಮಣಿ, ಅಣ್ಣಪ್ಪ ಓಲೇಕಾರ, ಕಲ್ಲಪ್ಪ ಪುಟ್ಟಪ್ಪನವರ, ಪರಶುರಾಮ ಹುಲಿಹೊಂಡ, ಆನಂದ ಕಡ್ಲಾಸ್ಕರ, ಪುಂಡಲೀಕ ಜಾಧವ, ದಾವಲ ನದಾಫ್, ಬಸವರಾಜ ಪುಟ್ಟಪ್ಪನವರ, ಶ್ರೀಧರ ದ್ಯಾವಪ್ಪನವರ, ಗಂಗಪ್ಪ ಗೌಳಿ, ಬಸವರಾಜ ಕಡ್ಲಾಸ್ಕರ, ಅಶೋಕ ಆಡಿನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net