

ಲೋಕಾಪುರ: ರನ್ನ ಉತ್ಸವದ ನಿಮಿತ್ತ ಆಯೋಜಿಸಿರುವ ರಥಯಾತ್ರೆಯನ್ನು ಪಟ್ಟಣದ ಜನತೆ ಹಾಗೂ ಅಧಿಕಾರಿಗಳು ಭಾನುವಾರ ಲೋಕೇಶ್ವರ ದೇವಸ್ಥಾನ ಆವರಣದಲ್ಲಿ ಬರಮಾಡಿಕೊಂಡರು.
ಉಪ ತಹಸೀಲ್ದಾರ್ ಬಿ.ಎಸ್. ರಂಗಣ್ಣವರ ಮಾತನಾಡಿ, ೆ.22ರಿಂದ 24ರವರೆಗೆ ಮುಧೋಳ ಮತ್ತು ಬೆಳಗಲಿಯಲ್ಲಿ ರನ್ನ ಉತ್ಸವ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಉತ್ಸವ ಯಶಸ್ಸಿಗೆ ಲೋಕಾಪುರ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಪಪಂ ಮುಖ್ಯಾಧಿಕಾರಿ ಜ್ಯೋತಿ ಉಪ್ಪಾರ, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಸಂಗಮೇಶ ನಿಲಗುಂದ ಮಾತನಾಡಿದರು.
ಬಸವೇಶ್ವರ ವೃತ್ತದವರೆಗೆ ಅದ್ದೂರಿ ಮೆರವಣಿಗೆ ಮುಖಾಂತರ ನಾಗಣಾಪುರ ಗ್ರಾಮಕ್ಕೆ ರಥೋತ್ಸವ ಬೀಳ್ಕೊಡಲಾಯಿತು.
ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ರಮೇಶ ನಿಡೋಣಿ, ವಿ.ಎ.ವರ್ಚಗಲ್, ಮಂಜುನಾಥ ಪಾಟೀಲ, ಎಸ್.ಎ್.ನಾಯ್ಕ, ಭಾಗ್ಯಶ್ರೀ ಪಾಟೀಲ, ಬಿ.ಜಿ.ಜೋಶಿ, ಸಿಆರ್‌ಪಿ ಗಂಗಾಧರ ಗಾಣಗೇರ, ಅರವಿಂದ ಪಾಟೀಲ, ಬಸವರಾಜ ಗಂಗಣ್ಣವರ, ವಿಠ್ಠಲ ಬಂಡಿ, ಎಸ್.ಎಂ.ಹಡಪದ ಇದ್ದರು.