

ಕುಶಾಲನಗರ :
ವಿಶ್ವ ವಿಖ್ಯಾತ ಸುತ್ತೂರು ಜಾತ್ರಾ ಮಹೋತ್ಸವ ಫೆ 6 ರಿಂದ 11 ರವರೆಗೆ ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಾಡಿನಾದ್ಯಂತ ಹೆಚ್ಚಿನ ಮಂದಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಬೇಕೆಂಬ ಮಹದಾಸೆಯಿಂದ ರಾಜ್ಯದ ಉದ್ದಗಲಕ್ಕೂ ಸಂಚರಿಸುತ್ತಿರುವ ರಥ ಕುಶಾಲನಗರಕ್ಕೆ ಆಗಮಿಸಿದಾಗ ಶ್ರೀಮಠದ ಭಕ್ತ ಸಂಕುಲ ಸ್ವಾಗತಿಸಿತು.
ಈ ಸಂದರ್ಭ ಮಾತನಾಡಿದ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಹೆಚ್.ವಿ.ಶಿವಪ್ಪ, ಜಾತ್ರಾ ಮಹೋತ್ಸವ ಫೆ 6 ರಿಂದ 11 ರವರೆಗೆ ನಡೆಯಲಿದ್ದು ಲಕ್ಷಾಂತರ ಮಂದಿ ಭಾಗವಹಿಸಲಿದ್ದು ಅಷ್ಟೂ ಮಂದಿಗೂ ಅಷ್ಟೇ ಶಿಸ್ತು ಹಾಗೂ ಶ್ರದ್ದೆಯಿಂದ ಪ್ರಸಾದ ವ್ಯವಸ್ಥೆ ಶ್ರೀಮಠದಿಂದ ನಡೆಯುವುದು ವಾಡಿಕೆ. ಹಾಗಾಗಿ ಈ ಭಾರಿಯೂ ಅಪಾರ ಮಂದಿ ಪಾಲ್ಗೊಳ್ಳಬೇಕೆಂಬುದು ಸುತ್ತೂರು ಶ್ರೀಗಳು ಆಶಯವಾಗಿರುವುದರಿಂದ ನಾಡಿನ ಸಮಸ್ತ ಮಂದಿ ಜಾತಿ ವರ್ಗ ಬೇಧವಿಲ್ಲದೇ ಆಗಮಿಸಬೇಕೆಂದು ಕೋರಿದರು.
ಈ ಸಂದರ್ಭ ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ಎಸ್.ಅಶೋಕ್, ಸಂಚಾರಿ ಠಾಣೆಯ ನಿರೀಕ್ಷಕ ಚಂದ್ರಪ್ಪ, ಜಿಲ್ಲಾ ವಚನ ಸಾಹಿತ್ಯ ವೇದಿಕೆ ಅಧ್ಯಕ್ಷ ಕೆ.ಎಸ್.ಮೂರ್ತಿ, ವೀರಶೈವ ನೌಕರರ ಸಂಘದ ಜಿಲ್ಲಾಧ್ಯಕ್ಷ ನಂದೀಶ್, ಕಾವೇರಿ ನದಿ ಸ್ವಚ್ಚತಾ ಆಂದೋಲನದ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್, ಪಿ.ಮಹದೇವಪ್ಪ, ಸಾಂಬಶಿವಮೂರ್ತಿ, ಉದಯಕುಮಾರ್, ಕುಶಾಲನಗರ ಪುರಸಭಾ ಸದಸ್ಯ ತಿಮ್ಮಪ್ಪ, ಎಂ.ಎಸ್.ಶಿವಾನಂದ, ಹರೀಶ್, ಪರಮೇಶ್, ಗಣೇಶ್, ಕಾರು ಚಾಲಕರ ಸಂಘದ ಉಪಾಧ್ಯಕ್ಷ ಸೋಮಣ್ಣ, ಸುತ್ತೂರು ಜಾತ್ರಾ ಮಹೋತ್ಸವ ಪ್ರಚಾರ ಸಮಿತಿ ಸಂಚಾಲಕ ಪಂಚಾಕ್ಷರಿ, ಶ್ರೀಕಂಠಸ್ವಾಮಿ, ಗಿರೀಶ್, ಸೋಮಶೇಖರ್, ಮಹದೇವಸ್ವಾಮಿ ಇತರರಿದ್ದರು.