ಕಿತ್ತೂರು ರಾಣಿ ಚನ್ನಮ್ಮ ಜ್ಯೋತಿಗೆ ಸ್ವಾಗತ

ಮೇಲುಕೋಟೆಗೆ ಆಗಮಿಸಿದ್ದ ವೀರರಾಣಿ ಕಿತ್ತೂರು ಚನ್ನಮ್ಮ ಜ್ಯೋತಿಯನ್ನು ಜಾನಪದ ಕಲಾತಂಡಗಳೊಂದಿಗೆ ಸ್ವಾಗತಿಸಲಾಯಿತು.
ಮೇಲುಕೋಟೆಗೆ ಆಗಮಿಸಿದ್ದ ವೀರರಾಣಿ ಕಿತ್ತೂರು ಚನ್ನಮ್ಮ ಜ್ಯೋತಿಯನ್ನು ಜಾನಪದ ಕಲಾತಂಡಗಳೊಂದಿಗೆ ಸ್ವಾಗತಿಸಲಾಯಿತು.
Published on

ಮೇಲುಕೋಟೆ: ಚೆಲುವನಾರಾಯಣನ ಸನ್ನಿಧಿ ಮೇಲುಕೋಟೆಗೆ ಆಗಮಿಸಿದ ವೀರರಾಣಿ ಕಿತ್ತೂರು ಚನ್ನಮ್ಮ ಜ್ಯೋತಿಯನ್ನು ಜಾನಪದ ಕಲಾತಂಡಗಳೊಂದಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಚೆಲುವನಾರಾಯಣಸ್ವಾಮಿ ದೇವಾಲಯ ವತಿಯಿಂದ ಚನ್ನಮ್ಮ ಜ್ಯೋತಿಗೆ ಪುಷ್ಪ ಹಾರ ಅರ್ಪಿಸಿ ವಿಶೇಷ ಪೂಜೆ ಮಾಡಿದ ಬಳಿಕ ಕಿತ್ತೂರು ಉತ್ಸವ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿ ರಥವನ್ನು ಬೀಳ್ಕೊಡಲಾಯಿತು. ದೇವಾಲಯದ ಪರಿಚಾರಕ ಹಾಗೂ ಪಾರುಪತ್ತೇಗಾರ್ ಎಂ.ಎನ್.ಪಾರ್ಥಸಾರಥಿ ಜ್ಯೋತಿಗೆ ದೇವಾಲಯದ ಪರವಾಗಿ ಗೌರವ ಅರ್ಪಿಸಿ ಪೂಜೆ ನೆರವೇರಿಸಿದರು.

ರಥಯಾತ್ರೆಯ ಮಾರ್ಗದರ್ಶಿ ಅಧಿಕಾರಿ ಕೆ.ಐ.ಶಾಗನೂರ, ಮೇಲುಕೋಟೆ ಉಪ ತಹಸೀಲ್ದಾರ್ ರಾಜೇಶ್, ಗ್ರಾಮ ಆಡಳಿತಾ ಧಿಕಾರಿ ರಮೇಶ್, ಮುಖ್ಯಶಿಕ್ಷಕ ಸಂತಾನರಾಮನ್, ಜನಪದ ಕಲಾವಿದ ಯಗ್ಗಡಹಳಿ ್ಳಕೃಷ್ಣೇಗೌಡ ಮತ್ತಿತರರು ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net