ದೇವಲಾಪುರದಲ್ಲಿ ಕನ್ನಡ ರಥಕ್ಕೆ ಸ್ವಾಗತ

29-GPT-2
ಗುಂಡ್ಲುಪೇಟೆ ತಾಲೂಕಿಗೆ ಆಗಮಿಸಿದ ಕನ್ನಡ ರಥವನ್ನು ದೇವಲಾಪುರ ಸಮೀಪ ಬರಮಾಡಿಕೊಳ್ಳಲಾಯಿತು. ರಮೇಶ್ ಬಾಬು, ಗಿರಿಜ, ನಾಗೇಂದ್ರ, ಮಹದೇವಸ್ವಾಮಿ ಇದ್ದರು.
Published on

ಗುಂಡ್ಲುಪೇಟೆ: ತಾಲೂಕಿಗೆ ಗುರುವಾರ ಚಾಮರಾಜನಗರದಿಂದ ಆಗಮಿಸಿದ ಕನ್ನಡ ಜ್ಯೋತಿ ರಥವನ್ನು ತಾಲೂಕು ಆಡಳಿತ ಹಾಗೂ ಕನ್ನಡ ಸಂಘಟನೆಗಳಿಂದ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು.
ತಾಲೂಕಿನ ಚಾಮರಾಜನಗರ ಗಡಿಯಾದ ದೇವಲಾಪುರದಲ್ಲಿ ರಥವನ್ನು ಕಂದಾಯಾಧಿಕಾರಿಗಳು ಬರಮಾಡಿಕೊಂಡರು. ತಹಸೀಲ್ದಾರ್ ಟಿ.ರಮೇಶ್ ಬಾಬು ಚಾಮರಾಜನಗರ ತಹಸೀಲ್ದಾರ್ ಗಿರಿಜಾ ಅವರಿಂದ ಕನ್ನಡ ಬಾವುಟ ಪಡೆದುಕೊಂಡರು. ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶೇಖರ್, ತೆರಕಣಾಂಬಿ ನಾಡಕಚೇರಿಯ ಕಂದಾಯಾಧಿಕಾರಿ ನಾಗೇಂದ್ರ, ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹದೇವಸ್ವಾಮಿ ಹಾಗೂ ಕನ್ನಡ ಸಂಘಟನೆಗಳ ಪದಾದಿಕಾರಿಗಳು, ಗ್ರಾಮದ ಬಲಚವಾಡಿ ಪುಟ್ಟಬಸಪ್ಪ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net