

ಹೊನ್ನಾವರ: ಸಿದ್ದಾಪುರ ತಾಲೂಕಿನ ಭುವನಗಿರಿಯಲ್ಲಿ ಉದ್ಘಾಟನೆಗೊಂಡು ಭಾನುವಾರ ಮಧ್ಯಾಹ್ನ ತಾಲೂಕನ್ನು ಪ್ರವೇಶಿಸಿದ ಕನ್ನಡ ರಥಕ್ಕೆ ತಾಲೂಕು ಆಡಳಿತದ ವತಿಯಿಂದ ಪೂರ್ಣಕುಂಭದೊಂದಿಗೆ ಸ್ವಾಗತಿಸಿ ಪೂಜೆ ಸಲ್ಲಿಸಲಾಯಿತು.
ಹಿರಿಯ ಸಾಹಿತಿ ಡಾ. ಎನ್.ಆರ್.ನಾಯಕ ಕನ್ನಡರಥಕ್ಕೆ ಆರತಿ ಬೆಳಗಿ ಸ್ವಾಗತಿಸಿದರು. ತಹಸೀಲ್ದಾರ್ ರವಿರಾಜ ದೀಕ್ಷಿತ್ ಶ್ರೀ ಭುವನೇಶ್ವರಿ ದೇವಿಗೆ ಮಾಲಾರ್ಪಣೆ ಮಾಡಿದರು.
ಉಪತಹಸೀಲ್ದಾರ್ ಉಷಾ ಪಾವಸ್ಕರ್, ಪಪಂ. ಮುಖ್ಯಾಧಿಕಾರಿ ಯೇಸು ಬೆಂಗಳೂರು, ತಾಪಂ ಇಒ ಚೇತನಕುಮಾರ, ಬಿಇಒ ಜಿ.ಎಸ್. ನಾಯ್ಕ, ಸಿಡಿಪಿಒ ವನಿತಾ, ಡಾ. ಎಸ್.ಡಿ.ಹೆಗಡೆ, ಬಿ.ಎನ್.ವಾಸರೆ, ಪಿ.ಆರ್. ನಾಯ್ಕ, ಎಸ್.ಎಚ್. ಗೌಡ, ಎಚ್.ಎಂ. ಮಾರುತಿ, ಗಜಾನನ ನಾಯ್ಕ, ನಾರಾಯಣ ಹೆಗಡೆ, ಆರ್.ಟಿ.ನಾಯ್ಕ, ಎಂ.ಜಿ.ನಾಯ್ಕ, ಸುಧೀಶ ನಾಯ್ಕ, ಮಂಜುನಾಥ ನಾಯ್ಕ ಇತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.