

ಧಾರವಾಡ: ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಕರೋನಾ ಐಸೋಲೇಷನ್ ವಾರ್ಡ್ನಲ್ಲಿ ಒಂದು ವಾರ ಕಾಲ ಕಾರ್ಯ ನಿರ್ವಹಿಸಿ ಶುಕ್ರವಾರ ಸ್ವ ಗೃಹಕ್ಕೆ ಮರಳಿದ ನರ್ಸಿಂಗ್ ಆಫೀಸರ್ಗೆ ಅವರನ್ನು ಸ್ಥಳೀಯ ನಿವಾಸಿಗಳು ಸ್ವಾಗತ ಕೋರಿದರು.
ಇಲ್ಲಿನ ಸುತ್ತೂರ ಕಾಲನಿ ಮಧು ಅಪಾರ್ಟ್ವೆುಂಟ್ ನಿವಾಸಿ ಜ್ಯೋತಿ ಕಲ್ಲೂರಮಠ ಎಂಬುವವರಿಗೆ ಸ್ವಾಗತ ಕೋರಲಾಯಿತು. ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಒಂದು ವಾರ ಕಾಲ ಐಸೋಲೇಷನ್ ವಾರ್ಡ್ನಲ್ಲಿನ ರೋಗಿಗಳ ಆರೈಕೆಯಲ್ಲಿ ಜ್ಯೋತಿ ತೊಡಗಿದ್ದರು. ತಮ್ಮಿಂದ ಕುಟುಂಬದ ಸದಸ್ಯರಿಗೆ ಯಾವುದೇ ತೊಂದರೆ ಆಗದಿರಲಿ ಎಂಬ ಕಾರಣಕ್ಕೆ ಮನೆಗೆ ತೆರಳಿರಲಿಲ್ಲ. ಇದೀಗ ತಮ್ಮ ಸೇವೆ ಮುಗಿಸಿ ಮನೆಗೆ ಆಗಮಿಸಿದ ಸಂದರ್ಭದಲ್ಲಿ ಅಪಾರ್ಟ್ವೆುಂಟ್ ನಿವಾಸಿಗಳು ಅವರಿಗೆ ಪುಷ್ಪವೃಷ್ಟಿ ಸಲ್ಲಿಸಿದರು. ಜ್ಯೋತಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಹೂಗುಚ್ಛ ನೀಡಿ ಆರತಿ ಎತ್ತಿ ಅಭಿನಂದನೆ ಸಲ್ಲಿಸಿದರು.