

ಹುಬ್ಬಳ್ಳಿ: ವಿದ್ಯಾರ್ಥಿಗಳು ಕೌಶಲ ಬೆಳೆಸಿಕೊಳ್ಳುವದರೊಂದಿಗೆ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಕಠಿಣ ಪರಿಶ್ರಮದೊಂದಿಗೆ ಸಾಧನೆ ಮಾಡಬೇಕು ಎಂದು ಜೈನ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ ಬಣಕಾರ ಹೇಳಿದರು.
ಇಲ್ಲಿಯ ಉಣಕಲ್ಲ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಐ.ಜಿ. ಹಿರೇಗೌಡರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಮಂಗಳವಾರ ಸಹಪಠ್ಯ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಹಿರಿಯರ ಮತ್ತು ಶಿಕ್ಷಕರ ಮಾರ್ಗದರ್ಶನದಲ್ಲಿ ಮುಂದೆ ಬಂದು ವಿದ್ಯಾಭ್ಯಾಸ ಮಾಡಿ ಸಮಾಜಕ್ಕೆ ಮಾದರಿಯಾಗಬೇಕು. ಶ್ರೇಯಸನ್ನು ಗಳಿಸಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ಕೇಂದ್ರ ಸಲಹಾ ಸಮಿತಿ ಸದಸ್ಯ ರಾಮಣ್ಣ ತಡಹಾಳ ಮಾತನಾಡಿ, ಸರಿಯಾಗಿ ವಿದ್ಯಾಭ್ಯಾಸ ಮಾಡಿ ದ್ವೀತಿಯ ಪಿಯು ಪರೀೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆಯುವ ಮೂಲಕ ಸಂಸ್ಥೆಗೆ ಗೌರವ ತರಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸ್ಥಳಿಯ ಸಲಹಾ ಸಮಿತಿ ಅಧ್ಯಕ್ಷ ಶಿವಾನಂದ ಹೆಬಸೂರ ಮಾತನಾಡಿ, ಜೀವನದ ಸಕಲ ಸಂಘರ್ಷಗಳಿಗೆ ವಿದ್ಯೆಯೇ ಸಂಜೀವಿನಿಯಂತೆ. ತಾಳ್ಮೆ ಮತ್ತು ಜಾಣ್ಮೆಗಳು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಲು ಅವಕಾಶ ಮಾಡಿಕೊಡುತ್ತದೆ ಎಂದರು.
ಕಾಲೇಜಿನ ಅಭಿವೃದ್ಧಿಗಾಗಿ ದೇಣಿಗೆ ನೀಡಿದ ಕಲ್ಲಪ್ಪ ಹನಮಂತಪ್ಪ ಬಾದಾಮಿ, ದಾನಿಗಳಾದ ಕರಿಯಪ್ಪ ಧಾರವಾಡ, ಹನುಮಂತಪ್ಪ ಯಲಿವಾಳ, ನಾಗರಾಜ ಮಾಳಗಿ, ಕೆ.ಎಸ್. ನರಗುಂದ ಅವರನ್ನು ಸನ್ಮಾನಿಸಲಾಯಿತು.
ರವಿಕುಮಾರ ಬಿಸಗಲ್ಲ, ಎಸ್.ಎಂ. ಸೋಮನಗೌಡರ, ಆರ್.ವಿ. ಪಾಟೀಲ, ಆರ್.ಎಸ್. ಹನ್ನಿ, ಎಸ್.ಎಂ. ಪಾಟೀಲ, ಮೋಹನ ಬಡ್ನಿ, ಪ್ರಾಂಶುಪಾಲರಾದ ಮೇಘಾ ಎಂ.ಜೆ, ಕಾರ್ಯದರ್ಶಿ ಶಿವಕುಮಾರಗೌಡ ಬಿ.ಜಿ, ವಿದ್ಯಾರ್ಥಿ ಪ್ರತಿನಿಧಿ ಕುಲ್ಸುಂಭಿ ದಾಸನಕೊಪ್ಪ ಮತ್ತು ಅಲ್ತಾಫ್ ನದಾಫ್, ಸಲಹಾ ಸಮಿತಿ ಸದಸ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ರಮ್ಯಾ ಜಾಲಗಾರ ನಿರೂಪಿಸಿದರು. ಅಕ್ಷತಾ ಕವಳಿಕಾಯಿ ಸ್ವಾಗತಿಸಿದರು. ತುಳಸಿ ಜಾಲಗಾರ ವಂದಿಸಿದರು.