ಸಿಐಪಿಇಟಿ ಡಿಪ್ಲೊಮಾ ವಿದ್ಯಾರ್ಥಿಗಳಿಗಾಗಿ ಸ್ವಾಗತ

23
Published on

ಮೈಸೂರು: ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ ಟೆಕ್ನಾಲಜಿಯ (ಸಿಐಪಿಇಟಿ) ಮೈಸೂರು ಶಾಖೆಯಲ್ಲಿ 2025-26 ಶೈಕ್ಷಣಿಕ ಸಾಲಿನ ಹೊಸ ಡಿಪ್ಲೊಮಾ ವಿದ್ಯಾರ್ಥಿಗಳಿಗಾಗಿ ಸ್ವಾಗತ ಮತ್ತು ಪರಿಚಯ ಕಾರ್ಯಕ್ರಮವನ್ನು ಇತ್ತೀಚೆಗೆ ಯಶಸ್ವಿಯಾಗಿ ಆಯೋಜಿಸಲಾಯಿತು.

ಕೇಂದ್ರ ರಾಸಾಯನಿಕಗಳು ಮತ್ತು ಪೆಟ್ರೋಕೆಮಿಕಲ್ಸ್ ಇಲಾಖೆಯ ಅಧಿಕೃತ ಭಾಷಾ ವಿಭಾಗದ ರಾಕೇಶ್‌ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಕೋರ್ಸ್‌ನಲ್ಲಿ ಇರುವ ಉದ್ಯೋಗವಕಾಶ, ಉದ್ಯಮಿ ಆಗಲು ಇರುವ ತಾಂತ್ರಿಕ ನೆರವು ಸೇರಿದಂತೆ ಇಲಾಖೆ ಕುರಿತು ಮಾಹಿತಿ ನೀಡಿ ಶುಭ ಕೋರಿದರು.

ಪ್ರಧಾನ ನಿರ್ದೇಶಕ ಹಾಗೂ ಮುಖ್ಯಸ್ಥರಾದ ಎಸ್.ವೈ. ಶಿರಾಲಿ ಅವರು, ಪಾಲಿಮರ್ ಮತ್ತು ಪ್ಲಾಸ್ಟಿಕ್ ಉದ್ಯಮದ ಮಹತ್ವವನ್ನು ವಿವರಿಸಿ, ಸಿಐಪಿಇಟಿ ಸಂಸ್ಥೆಯ ಡಿಪ್ಲೊಮಾ ಹಾಗೂ ಉಚಿತ ಕೌಶಲಾಭಿವೃದ್ಧಿ ಕೋರ್ಸ್‌ಗಳ ಮೂಲಕ ಯುವಕರ ಶಕ್ತೀಕರಣಕ್ಕೆ ತೊಡಗಿದೆ. ಈ ಕಾರ್ಯಕ್ರಮಗಳು ರಾಜ್ಯದ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಜತೆಗೆ ಉದ್ಯಮಶೀಲತೆಯನ್ನು ಉತ್ತೇಜಿಸುತ್ತದೆ ಎಂದು ವಿವರಿಸಿದರು.

ಈ ಪರಿಚಯ ಕಾರ್ಯಕ್ರಮವು ಹೊಸ ವಿದ್ಯಾರ್ಥಿಗಳು ಮತ್ತು ಅವರ ಪಾಲಕರು ಸಂಸ್ಥೆಯ ಶೈಕ್ಷಣಿಕ ವಾತಾವರಣ, ಸೌಲಭ್ಯಗಳು ಹಾಗೂ ಭವಿಷ್ಯ ಉದ್ಯೋಗದ ಅವಕಾಶಗಳ ಕುರಿತು ಅರಿವು ಪಡೆಯಲು ನೆರವಾಗಿತ್ತು. ವಿದ್ಯಾರ್ಥಿಗಳು ಕ್ಯಾಂಪಸ್ ಜೀವನದಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೋತ್ಸಾಹ ನೀಡುವುದೇ ಇದರ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ವ್ಯಸ್ಥಾಪಕ ಬಿ.ಎನ್. ಮೋಹನ, ತಾಂತ್ರಿಕ ಅಧಿಕಾರಿ ಭುವನೇಶ್ವರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net