

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಕ್ಕಳು ತಮ್ಮ ಸಾಮರ್ಥ್ಯದ ಅರಿವು ಹೊಂದಿರಬೇಕು. ಜ್ಞಾನದ ದಾಹ ಇದ್ದಾಗ ಯಶಸ್ಸನ್ನು ಕಾಣಲು ಸಾಧ್ಯ. ಹದಿ ಹರೆಯದ ವಯಸ್ಸಿನಲ್ಲಿ ಪ್ರತಿ ಹೆಜ್ಜೆ ಜೀವನ ರೂಪಿಸಿಕೊಳ್ಳಲು ಬಹಳ ಮುಖ್ಯ ಎಂದು ಮನೋರೋಗ ತಜ್ಞ ಡಾ. ಆನಂದ ಪಾಂಡುರAಗಿ ಹೇಳಿದರು.
ನಗರದ ಕೆಪಿಇಎಸ್ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪಾಲಿಕೆ ವಲಯ ಆಯುಕ್ತ ಶಂಕರ ಪಾಟೀಲ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಒಂದೇ ದಿನದಲ್ಲಿ ಸಿಗುವಂಥದ್ದಲ್ಲ. ಜೀವನದಲ್ಲಿ ಸಿಗುವ ಎಲ್ಲ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಕಠಿಣ ಪರಿಶ್ರಮ ಪಟ್ಟರೆ ಗುರಿ ತಲುಪಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ವಕೀಲ, ಕೆಪಿಇ ಸಂಸ್ಥೆಯ ಕಾರ್ಯದರ್ಶಿ ಬಿ.ವಿ. ಸೋಮಾಪುರ ಮಾತನಾಡಿ, ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಕಲಿಸಿದ ಗುರು, ಸಂಸ್ಥೆ ಮತ್ತು ತಂದೆ- ತಾಯಿಗೆ ಗೌರವ ಕೊಡಬೇಕು ಎಂದರು.
ಸ0ಸ್ಥೆಯ ಅಧ್ಯಕ್ಷೆ ಮಲ್ಲಮ್ಮ ಪಾಟೀಲ, ಕಾನೂನು ಕಾಲೇಜು ಪ್ರಾಚಾರ್ಯ ಸಂಜೀವ ಪಾಟೀಲ, ನಿರ್ದೇಶಕರಾದ ರಾಜೀವ ಪಾಟೀಲ, ನಂದಿನಿ ಸೋಮಾಪೂರ, ಉಪನ್ಯಾಸಕರಾದ ವಿನಾಯಕ ರಗಟಿ, ಮಹೇಶ ಬಣಕಾರ, ಕಿರಣ ಮಾ0ಡ್ರೆ, ಸುನಂದಾ ಮಾನೆ, ರೂಪಾ ಎಲಿಗಾರ, ಕಲ್ಪನಾ ಮದಕಟ್ಟಿ ಹಾಗೂ ವಿದ್ಯಾರ್ಥಿಗಳಿದ್ದರು.
ಎ.ಎಂ. ಶಲವಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವರುದ್ರಪ್ಪ ತಳವಾರ ಸ್ವಾಗತಿಸಿದರು. ನಂದಾ ಗೋಡ್ಸೆ ವಂದಿಸಿದರು.