

ಮಂಗಳೂರು: ಜಿಲ್ಲಾಡಳಿತದ ನಿಯಮ ಮತ್ತೆ ಬದಲಾಗಿದೆ. ವೀಕೆಂಡ್ ಕರ್ಫ್ಯೂ ಸಂದರ್ಭ ಅಗತ್ಯ ವಸ್ತುಗಳ ಖರೀದಿಗೆ ನೀಡಲಾಗಿದ್ದ ಅವಕಾಶವನ್ನು ರದ್ದುಪಡಿಸಲಾಗಿದ್ದು, ದಿನಸಿ ಸಹಿತ ಯಾವುದೇ ಅಂಗಡಿಗಳನ್ನು ತೆರೆಯುವುದಕ್ಕೆ ಅವಕಾಶ ಇಲ್ಲ.
ವಾರಾಂತ್ಯ ಕರ್ಫ್ಯೂ ಶುಕ್ರವಾರ ರಾತ್ರಿ 7ರಿಂದ ಸೋಮವಾರ ಬೆಳಗ್ಗೆ 7ರ ವರೆಗೆ ಜಾರಿಯಲ್ಲಿರುತ್ತದೆ. ಆ ಅವಧಿಯಲ್ಲಿ ಹಾಲಿನ ಬೂತ್, ಪತ್ರಿಕೆ ಮಾರಾಟ, ಮೆಡಿಕಲ್ಸ್, ಆಸ್ಪತ್ರೆಗಳು, 24x7 ಕೆಲಸ ಮಾಡುವ ಕಾರ್ಖಾನೆಗಳಿಗೆ ಅವಕಾಶವಿದೆ ಎಂದು ಪರಿಷ್ಕೃತ ಆದೇಶ ಸ್ಪಷ್ಟಪಡಿಸಿದೆ.