

ನರೇಗಲ್ಲ: ನಾಡಿಗೆ ದೊಡ್ಡದು ನಾಗರ ಪಂಚಮಿ ಎಂಬ ಈ ಮಾತು ಪಂಚಮಿ ಹಬ್ಬದ ಮಹತ್ವ, ವೈಭವವನ್ನು ಸಾರಿ ಸಾರಿ ಹೇಳುತ್ತದೆ. ಪಂಚಮಿ ಹಬ್ಬದ ಮೊದಲ ದಿನವನ್ನು ರೊಟ್ಟಿ ಪಂಚಮಿ ಹಬ್ಬ ಎಂದು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪಟ್ಟಣ, ಕೋಡಿಕೊಪ್ಪ, ಕೋಚಲಾಪೂರ, ತೋಟಗಂಟಿ, ಮಲ್ಲಾಪೂರ, ದ್ಯಾಂಪೂರ, ಬೂದಿಹಾಳ, ಜಕ್ಕಲಿ, ಮಾರನಬಸರಿ, ಕಳಕಾಪೂರ, ಅಬ್ಬಿಗೇರಿ, ಯರೇಬೇಲೇರಿ, ಕುರಡಗಿ, ನಾಗರಾಳ, ಡ.ಸ. ಹಡಗಲಿ, ಗುಜಮಾಗಡಿ ಸೇರಿದಂತೆ ಹೋಬಳಿಯಾದ್ಯಂತ ಭಾನುವಾರ ರೊಟ್ಟಿ ಹಬ್ಬದ ಕಳೆಗಟ್ಟಿತ್ತು. ಸಜ್ಜಿ ರೊಟ್ಟಿ, ಜೋಳದ ರೊಟ್ಟಿ, ಎಳ್ಳು ರೊಟ್ಟಿ, ಚಪಾತಿ, ಪುಂಡಿಪಲ್ಯ, ಕಡಲೆಕಾಳು ಪಲ್ಯ, ಬದನೆಕಾಯಿ ಎಣ್ಣೆಗಾಯಿ ಪಲ್ಯ, ಮಡಿಕೆ ಕಾಳು ಪಲ್ಯ, ಹಿಟ್ಟಿನ ಪಲ್ಯ, ಕೋಸಂಬರಿ, ಮೆಂತೆ ಸೊಪ್ಪು, ಶೇಂಗಾ ಉಂಡಿ, ಎಳ್ಳು ಉಂಡಿ, ಕಡಲೆ ಚಟ್ನಿ, ಪುಟಾಣಿ ಚಟ್ನಿ, ಶೇಂಗಾ, ಗುರೆಳ್ಳ , ಅಗಸಿ ಚಟ್ನಿ, ಚುರುಮುರು ಉಂಡಿ, ದಾಣಿ, ಹುಳ್ಳಡಕಿ, ರವಾ, ಬೇಸನ್, ಲಡಗಿ, ಹೆಸರು, ಅಂಟು, ಖರ್ಜಿಕಾಯಿ, ಶಂಕರಪಾಳಿ, ಬಾದುಷಾ, ಮಾದ್ಲಿ ಸೇರಿ ತರಹೇವಾರಿ ಖಾದ್ಯಗಳನ್ನ ತಯಾರಿಸಲಾಗಿತ್ತು. ಗೃಹಿಣಿಯರು ಅತ್ಯಂತ ಸಂಭ್ರಮದಿಂದ ಅಕ್ಕಪಕ್ಕದ ಆತ್ಮೀಯರ ಮನೆಗೆ ತೆರಳಿ ಎಲ್ಲಾ ಖಾದ್ಯಗಳ ಒಳಗೊಂಡ ರೊಟ್ಟಿ ಬುತ್ತಿ ಹಂಚಿದರು. ಸಾಮಾನ್ಯವಾಗಿ ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ ರೊಟ್ಟಿ ಬಡಿಯದ ದಿನವೇ ಇಲ್ಲ. ಆದರೆ, ನಾಗರ ಅಮಾವಾಸ್ಯೆಯಿಂದ ಪಂಚಮಿ ಮುಗಿಯುವವರೆಗೂ ಮನೆಯಲ್ಲಿ ರೊಟ್ಟಿ ಬಡಿಯುವಂತಿಲ್ಲ ಎಂಬ ಪದ್ಧ್ದ ಇಂದಿಗೂ ರೂಢಿಯಲ್ಲಿದೆ. ಆದ್ದರಿಂದ ಪಂಚಮಿ ಮುನಾ ್ನನಗಳಲ್ಲಿ ಎಲ್ಲರೂ ಹಲವು ರೀತಿಯ ರೊಟ್ಟಿಗಳನ್ನು ಮಾಡಿ ತಮ್ಮ ಸುತ್ತಲಿನ ಮನೆಯವರೊಂದಿಗೆ ಹಂಚಿಕೊಳ್ಳುವ ವಿಶೇಷ ಹಬ್ಬವೇ ರೊಟ್ಟಿ ಪಂಚಮಿಯಾಗಿದೆ.